ಕಣಿವೆ, ಆ. ೧೩: ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ಅಡಿಯಿಟ್ಟಿರುವ ನಾಪಂಡ ಮುತ್ತಪ್ಪ ಅವರ ತಂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಬಿಡದಿಯ ಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿತು. ಇದೇ ತಿಂಗಳ ತಾ. ೧೭ ಅಥವಾ ೧೮ ರಂದು ಕೊಡಗು ಜೆಡಿಎಸ್ ಜಿಲ್ಲಾಧ್ಯಕ್ಷರನ್ನು ಕರೆದು ಈ ಬಗ್ಗೆ ಚರ್ಚಿಸಿದ ಬಳಿಕ ಎಲ್ಲರ ಸಮ್ಮುಖದಲ್ಲಿ ನಾಪಂಡ ಮುತ್ತಪ್ಪ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಪಕ್ಷದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸುರೇಶ್, ಪ್ರವೀಣ್, ಮುಳ್ಳುಸೋಗೆ ರಾಜೇಶ್, ಕೂಡಿಗೆ ರಾಮಚಂದ್ರ ಮೊದಲಾದವರಿದ್ದರು.