ಮಡಿಕೇರಿ, ಆ. ೧೪: ಕೋವಿಡ್‌ನಿಂದ ಸಾವನ್ನಪ್ಪಿದವರ ಮೃತದೇಹಗಳನ್ನು ಅಂತ್ಯಸAಸ್ಕಾರಕ್ಕೆ ಸಿದ್ದಗೊಳಿಸುವ ಕಾಯಕದಲ್ಲಿ ೧೭ ತಿಂಗಳಿನಿAದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯ ರಾಬರ್ಟ್ ರಾಡ್ರಿಗಸ್, ಸಯ್ಯದ್ ಹುಸೇನ್ ಅವರುಗಳಿಗೆ ವೀರಾಜಪೇಟೆ ರೋಟರಿ ಕ್ಲಬ್‌ನಿಂದ ಗೃಹೋಪಯೋಗಿ ಪರಿಕರಗಳ ಕೊಡುಗೆ ನೀಡಿ ಸತ್ಕರಿಸಲಾಯಿತು.

ಜಿಲ್ಲಾ ಆಸ್ಪತ್ರೆಯಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ವಲಯ ೬ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಕೋವಿಡ್ ಸಂಕಷ್ಟ ಕಾಲದಲ್ಲಿ ಮೃತದೇಹಗಳನ್ನು ಅಂತ್ಯ ಸಂಸ್ಕಾರಕ್ಕೆ ಕ್ಲಬ್‌ನಿಂದ ಗೃಹೋಪಯೋಗಿ ಪರಿಕರಗಳ ಕೊಡುಗೆ ನೀಡಿ ಸತ್ಕರಿಸಲಾಯಿತು.

ಜಿಲ್ಲಾ ಆಸ್ಪತ್ರೆಯಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ವಲಯ ೬ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಕೋವಿಡ್ ಸಂಕಷ್ಟ ಕಾಲದಲ್ಲಿ ಮೃತದೇಹಗಳನ್ನು ಅಂತ್ಯ ಸಂಸ್ಕಾರಕ್ಕೆ ಕೋವಿಡ್ ದಿನಗಳ ಸಂದರ್ಭ ಅವಿರತ ಸೇವೆಯ ಮೂಲಕ ವೈದ್ಯಕೀಯ ಕಾಲೇಜಿಗೆ ಮಹತ್ವದ ಸೇವೆ ನೀಡಿದ್ದಾರೆ ಎಂದರು.

ವೀರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಡಾ. ಮಾದಂಡ ಲವೀನ್ ಚಂಗಪ್ಪ ಮಾತನಾಡಿ, ಮೂಕಳಮಾಡ ಕೆ. ಮೊಣ್ಣಪ್ಪ ಮತ್ತು ಎನ್.ಪಿ. ಗಾಯತ್ರಿ ದಂಪತಿ ವೀರಾಜಪೇಟೆ ರೋಟರಿ ಮೂಲಕ ನೀಡಿದ ಆರ್ಥಿಕ ನೆರವಿನಲ್ಲಿ ರಾಬರ್ಟ್ ಹಾಗೂ ಹುಸೇನ್ ಅವರಿಗೆ ನೆರವು ನೀಡಿದ್ದೇವೆ ಎಂದು ಹೇಳಿದರು.

ವೀರಾಜಪೇಟೆ ರೋಟರಿ ಕ್ಲಬ್ ಕಾರ್ಯದರ್ಶಿ ಭರತ್ ರಾಮ್ ರೈ, ವಲಯ ಸೇನಾನಿ ಆದಿತ್ಯ, ಡಾ. ಪ್ರಿಯದರ್ಶಿನಿ ಚಂಗಪ್ಪ, ವೈದ್ಯಕೀಯ ಕಾಲೇಜಿನ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ನಂಜುAಡೇಗೌಡ, ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮಂಜುನಾಥ್, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಕರುಂಬಯ್ಯ ಈ ಸಂದರ್ಭ ಹಾಜರಿದ್ದರು.