ಗೋಣಿಕೊಪ್ಪ ವರದಿ, ಆ. ೧೩: ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಆಡಳಿತ ಮಂಡಳಿ ಸಭೆ ಗೋಣಿಕೊಪ್ಪ ಸಿಲ್ವರ್ ಸ್ಕೆöÊ ಸಭಾಂಗಣದಲ್ಲಿ ನಡೆಯಿತು.

ಇತ್ತೀಚೆಗೆ ಕೊರೊನಾದಿಂದ ನಿಧನರಾದ ಸಂಘದ ಅಧ್ಯಕ್ಷ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅವರಿಗೆ ಸಂತಾಪ ಸೂಚಿಸಲಾಯಿತು. ತೆರವಾಗಿದ್ದ ಅಧ್ಯಕ್ಷ, ಕಾರ್ಯದರ್ಶಿ, ನಿರ್ದೇಶಕರುಗಳ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯದರ್ಶಿಯಾಗಿ ಬಡಕಡ ರಜಿತಾ ಕಾರ್ಯಪ್ಪ, ನಿರ್ದೇಶಕರಾಗಿ ಎಂ.ಎA. ಚನ್ನನಾಯಕ, ಚಿಮ್ಮಣಮಾಡ ದರ್ಶನ್ ದೇವಯ್ಯ, ಪುತ್ತಂ ಪ್ರದೀಪ್, ರೇಖಾ ಗಣೇಶ್ ಅವರನ್ನು ಆಯ್ಕೆ ಮಾಡಲಾಯಿತು.

ವಾರ್ಷಿಕ ಪ್ರಶಸ್ತಿಗೆ ವರದಿ ಆಹ್ವಾನಿಸಲು ನಿರ್ಧರಿಸಲಾಯಿತು. ಸೆಪ್ಟೆಂಬರ್ ತಿಂಗಳಲ್ಲಿ ಸಂಘದ ಮಹಾಸಭೆ, ಪ್ರಶಸ್ತಿ ಪ್ರದಾನ, ಅಧ್ಯಕ್ಷರಾಗಿದ್ದ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅವರ ನಿಧನಕ್ಕೆ ಸಂತಾಪ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.

ಜಿಲ್ಲಾ ಪತ್ರಕರ್ತರ ಸಂಘದ ಮೂವರು ಸದಸ್ಯರು ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘ ಎಂದು ಅಸ್ತಿತ್ವಕ್ಕೆ ತಂದಿರುವ ಬಗ್ಗೆ ಚರ್ಚೆ ನಡೆಯಿತು. ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಪತ್ರಕರ್ತರ ಸಂಖ್ಯೆ ಕಡಿಮೆ ಇರುವುದರಿಂದ ಪೊನ್ನಂಪೇಟೆಯಲ್ಲಿ ಸಂಘ ಸ್ಥಾಪಿಸುವುದು ಬೇಡ ಎಂಬ ನಿರ್ಧಾರ ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘ, ಜಿಲ್ಲಾ ಪತ್ರಕರ್ತರ ಸಂಘದ ಮಹಾಸಭೆಯಲ್ಲೂ ನಿರ್ಧಾರ ತೆಗೆದುಕೊಂಡಿದ್ದರೂ, ಜಿಲ್ಲಾ ಸಂಘದ ಅನುಮತಿ ಪಡೆಯದೆ ಸಂಘ ಸ್ಥಾಪಿಸಿರುವ ವಿಚಾರಕ್ಕೆ ಸಂಬAಧಿಸಿದAತೆ ಜಿಲ್ಲಾ ಸಂಘದಿAದ ಕ್ರಮಕ್ಕೆ ಪತ್ರ ಬರೆಯುವಂತೆ ನಿರ್ಧರಿಸಲಾಯಿತು. ಪ್ರಧಾನ ಕಾರ್ಯದರ್ಶಿ ರೆಜಿತ್‌ಕುಮಾರ್, ಖಜಾಂಜಿ ವಿ.ವಿ. ಅರುಣ್‌ಕುಮಾರ್, ನಿರ್ದೇಶಕರಾದ ಎನ್.ಎನ್. ದಿನೇಶ್, ಮಂಡೇಡ ಅಶೋಕ್, ಡಿ. ನಾಗೇಶ್ ಉಪಸ್ಥಿತರಿದ್ದರು.