ಮಡಿಕೇರಿ: ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷÀ ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ೫೦ನೇ ಜನ್ಮ ದಿನದ ಪ್ರಯುಕ್ತ ಹಲವರಿಗೆ ನೆರವು ನೀಡಲಾಯಿತು.
ಡಿ.ಎ. ಜೆಕಿಯಾ ಗೂನಡ್ಕ ಅವರಿಗೆ ೮ ಗ್ರಾಂ ಚಿನ್ನ, ಸಕೀನಾ ಅರಂತೋಡು ಅವರಿಗೆ ೪ ಗ್ರಾಂ ಚಿನ್ನ ನೀಡಲಾಯಿತು. ಜರೀನಾ ಗೂನಡ್ಕರಿಗೆ ರೂ. ೧೦ ಸಾವಿರ, ರಿಜ್ವಾನ್ ಗೂನಡ್ಕ ಹಾಗೂ ಸಲೀಮ್ ಗೂನಡ್ಕ ಅವರ ವೈದ್ಯಕೀಯ ವೆಚ್ಚಕ್ಕೆ ತಲಾ ೫ ಸಾವಿರ ರೂ. ಸೇರಿದಂತೆ ಒಟ್ಟು ರೂ. ೮೦ ಸಾವಿರ ಆರ್ಥಿಕ ನೆರವು ನೀಡಲಾಯಿತು ಎಂದು ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ತಿಳಿಸಿದ್ದಾರೆ.ಕೂಡಿಗೆ: ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ವಿಪತ್ತು ನಿರ್ವಹಣಾ ಸಮಿತಿ ವತಿಯಿಂದ ಕೂಡಿಗೆ ಧರ್ಮಸ್ಥಳ ಸಂಘದವರಿಗೆ ಆಹಾರ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭ ಸೋಮವಾರಪೇಟೆ ವಲಯ ಅಧಿಕಾರಿ ಜಯಂತಿ, ವಿಸ್ತರಣಾಧಿಕಾರಿ ಕಲಾವತಿ, ಸಂಗೀತ, ಕುಸುಮ, ಕೂಡಿಗೆ ವಿಭಾಗ ಸಂಘದ ಪದಾಧಿಕಾರಿಗಳು ಹಾಜರಿದ್ದರು.ಪೆರಾಜೆ: ಇಲ್ಲಿಗೆ ಸಮೀಪದ ಅಲೆಟ್ಟಿ ಗ್ರಾಮದ ಬಾಬು ಮತ್ತು ತಂಡಕ್ಕೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಡಮಾಡುವ ವಾದ್ಯ ಪರಿಕರಗಳನ್ನು ನೂತನ ಸಚಿವ ಅಂಗಾರ ವಿತರಿಸಿದರು.
ಈ ಸಂದರ್ಭ ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ, ಕುಸುಮಾಧರ ಎ.ಟಿ, ಪುರುಷೋತ್ತಮ ಕಿರ್ಲಾಯ, ಕಿರಣ್ ಕುಂಬಳಚೇರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಸೇರಿದಂತೆ ಅಲೇಟ್ಟಿ ಸೊಸೈಟಿಯ ಅಧ್ಯಕ್ಷರು ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ, ಗ್ರಾಮಸ್ಥರು ಉಪಸ್ಥಿತರಿದ್ದರು.ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ಪ್ರಾರಂಭಿಸಿ ನಿವೃತ್ತರಾದ ಸಿ.ಪಿ. ಮೀನಾಕ್ಷಿ ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆ, ತಾವು ಕೆಲಸ ನಿರ್ವಹಿಸಿದ ಶಾಲೆಗೆ ೬೦ ಚೇರ್‌ಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭ ಶಾಲೆಯ ಪದವೀಧರ ಮುಖ್ಯ ಶಿಕ್ಷಕಿ ಎಂ.ಜೆ. ಅಣ್ಣಮ್ಮ, ಶಿಕ್ಷಕರುಗಳಾದ ಕೆ.ಟಿ. ಚಂದ್ರಕಲಾ, ಹೆಚ್.ಎ. ನಾಗೇಶ್, ಹೆಚ್. ರಮೇಶ್, ಡಿ.ಈ. ಶಾರದ, ಎಸ್.ಎಸ್. ಶಾಂತ, ಕೆ.ಆರ್. ಶಿಲ್ಪ, ಎಂ. ಆಶಾಲತಾ ಉಪಸ್ಥಿತರಿದ್ದರು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಮಸೀದಿ ಬೀದಿ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರವನ್ನು ವಿತರಿಸಲಾಯಿತು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಅನುದಾನದ ಶೇ. ೨೫ ರ ಭಾಗದಲ್ಲಿ ಮೀಸಲಾದ ಹಣದಲ್ಲಿ ಅರ್ಹ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ೨೩ ಮಂದಿಗೆ ಟಾರ್ಪಲ್ ವಿತರಣೆ ಮಾಡಲಾಯಿತು.
ಬ್ಯಾಡಗೊಟ್ಟ ಹುದುಗೂರು ಮಲ್ಲೇನಹಳ್ಳಿ ಮದಲಾಪುರ ಗ್ರಾಮದ ೨೩ ಮಂದಿಗೆ ಅತಿಯಾದ ಮಳೆಯಿಂದಾಗಿ ಮನೆ ಹಾನಿಯಾಗಿದ್ದವರಿಗೆ ಟಾರ್ಪಲ್ ವಿತರಣೆ ಮಾಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್, ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಸದಸ್ಯ ಟಿ.ಪಿ. ಹಮೀದ್, ಅಭಿವೃದ್ಧಿ ಅಧಿಕಾರಿ ಎಂ.ಕೆ. ಆಯಿಷಾ ಸೇರಿದಂತೆ ಇನ್ನಿತರರು ಹಾಜರಿದ್ದರು.