ಸೋಮವಾರಪೇಟೆ, ಆ. ೧೪: ಮಾನವನ ಅತಿಯಾದ ಚಟುವಟಿಕೆ ಹಾಗೂ ಪ್ರಕೃತಿ ಮೇಲಿನ ನಿರಂತರ ದೌರ್ಜನ್ಯಗಳಿಂದ ಅಪಾಯ ದಂಚಿನಲ್ಲಿರುವ ಜೀವ ವೈವಿಧ್ಯ ಸಂರಕ್ಷಣೆಗೆ ಎಲ್ಲರೂ ಕಟಿಬದ್ಧ ರಾಗಬೇಕೆಂದು ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಂಗಪ್ಪ ಅಭಿಪ್ರಾಯಿಸಿದರು.
ಕೊಡಗು ಅರಣ್ಯ ವೃತ್ತದ ಸಾಮಾಜಿಕ ಅರಣ್ಯ ವಲಯ, ಜಿಲ್ಲಾ ರಾಷ್ಟಿçÃಯ ಹಸಿರು ಪಡೆ, ತಾಲೂಕು ಜೀವ ವೈವಿಧ್ಯ ನಿರ್ವಹಣಾ ಸಮಿತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿ ಸಂಯುಕ್ತ ಆಶ್ರಯದಲ್ಲಿ, ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ‘ನಮ್ಮ ನಡೆ ಹಸಿರೆಡೆಗೆ’ ಎಂಬ ಪರಿಸರ ಜಾಗೃತಿ ಕಾರ್ಯಕ್ರಮದಡಿ ಏರ್ಪಡಿಸಿದ್ದ ಅಂರ‍್ರಾಷ್ಟಿçÃಯ ಜೀವ ವೈವಿಧ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹವಾಮಾನ ಬದಲಾವಣೆ, ಪರಿಸರದ ಮೇಲೆ ಅತಿಯಾದ ಮಾನವನ ಹಸ್ತಕ್ಷೇಪದಿಂದ ಇಂದು ಜೀವವೈವಿಧ್ಯ ನಾಶವಾಗುತ್ತಿದ್ದು, ಇದನ್ನು ಸಂರಕ್ಷಿಸದೇ ಇದ್ದಲ್ಲಿ ಇಡೀ ಪರಿಸರ ಅಸಮತೋಲನಗೊಂಡು ಭವಿಷ್ಯದಲ್ಲಿ ಗಂಡಾAತರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ರಾಜ್‌ಗೋಪಾಲ್ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಷ್ಟಿçÃಯ ಹಸಿರು ಪಡೆಯ ಜಿಲ್ಲಾ ನೋಡೆಲ್ ಅಧಿಕಾರಿ ಟಿ.ಜಿ. ಪ್ರೇಮ್‌ಕುಮಾರ್, ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ಸುನಂದ್‌ಕುಮಾರ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಟಿ.ಎಂ. ರವೀಂದ್ರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಜಯಣ್ಣ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥ ಶೆಟ್ಟಿ, ಪ್ರಗತಿಪರ ಕೃಷಿಕ ಅರೆಯೂರು ಜೋಯಪ್ಪ, ಪರಿಸರ ಕಾರ್ಯಕರ್ತ ಹೆಚ್.ಸಿ. ಗೋವಿಂದರಾಜ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.