ಪೊನ್ನಂಪೇಟೆ, ಆ. ೧೪: ನಬಾರ್ಡ್ ಬೆಂಗಳೂರು ಮತ್ತು ಓಡಿಪಿ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ, ಜೀವನೋಪಾ ಯ ಉದ್ಯಮಗಳ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ನಡೆದ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಪೊನ್ನಂಪೇಟೆ ಸಂತ ಅಂತೋಣಿ ದೇವಾಲಯ ಆವರಣದಲ್ಲಿ ನಡೆಯಿತು.
ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಓಡಿಪಿ ಸಂಸ್ಥೆಯ ನಿರ್ದೇಶಕ ಫಾದರ್ ಅಲೆಕ್ಸ್ ಪ್ರಶಾಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಎಲ್ಲಾ ಮಹಿಳೆಯರು ವಿವಿಧ ರೀತಿಯ ತರಬೇತಿ ಪಡೆದು ತಮ್ಮ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳ ಬೇಕು. ಆಕರ್ಷಕ ಜಗತ್ತಿನಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ವಸ್ತçವಿನ್ಯಾಸ ವನ್ನು ಮಾಡುವ ಕಲೆಯನ್ನು ಕಲಿತುಕೊಳ್ಳಬೇಕು ಎಂದರು. ಪೊನ್ನಂಪೇಟೆ ಸಂತ ಅಂತೋಣಿ ಚರ್ಚ್ನ ಧರ್ಮಗುರು ಡೇವಿಡ್ ಸಗಾಯ್ ರಾಜ್ ಮಾತನಾಡಿ, ಮಹಿಳೆ ಯರು ಸ್ವ ಸಹಾಯ ಸಂಘಗಳನ್ನು ರಚಿಸಿಕೊಂಡು ಮಹಿಳೆಯರಿಗೆ ವಿವಿಧ ರೀತಿಯ ತರಬೇತಿಯನ್ನು ನೀಡಿ, ಸ್ವಉದ್ಯೋಗದಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡಿ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಗಳಾಗುವಂತೆ ಮಾಡಬೇಕು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ವಿ. ಗಿರಿಜಾ, ಉಪಾಧ್ಯಕ್ಷೆ ದಶಮಿ, ಮೈಸೂರು ಓಡಿಪಿ ಸಂಯೋಜಕರಾದ ಮೋಲಿ, ಲಲಿತ, ಓಡಿಪಿ ಕಾರ್ಯ ಕರ್ತರಾದ ರೀಟಾ ಜೋಸೆಫ್, ಅಕ್ಷಯ್ ಉಪಸ್ಥಿತರಿದ್ದರು. ಈ ಸಂದರ್ಭ ತರಬೇತಿ ಪಡೆದ ೩೦ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.