ಮಡಿಕೇರಿ, ಆ. ೧೪: ಹಲವು ವರ್ಷಗಳಿಂದ ಬಗೆಹರಿಯದ ಪ್ರಕರಣಗಳನ್ನು ಇತ್ಯರ್ಥ ಮಾಡುವ ಸಲುವಾಗಿ ರಾಜ್ಯಾದ್ಯಂತ ಆರಂಭಗೊAಡಿರುವ ಮೆಗಾ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯಲ್ಲಿ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಗಳಾದ ಎನ್.ಎಸ್. ಸಂಜಯ್ ಗೌಡ ಅವರು ಚಾಲನೆ ನೀಡಿದರು.
ನಗರದ ಕೋಟೆ ಆವರಣದಲ್ಲಿ ರುವ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ ಹೈಕೋರ್ಟ್ ನ್ಯಾಯಾಧೀಶರು, ಕೆಲವು ಪ್ರಕರಣಗಳ ಮಡಿಕೇರಿ, ಆ. ೧೪: ಹಲವು ವರ್ಷಗಳಿಂದ ಬಗೆಹರಿಯದ ಪ್ರಕರಣಗಳನ್ನು ಇತ್ಯರ್ಥ ಮಾಡುವ ಸಲುವಾಗಿ ರಾಜ್ಯಾದ್ಯಂತ ಆರಂಭಗೊAಡಿರುವ ಮೆಗಾ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯಲ್ಲಿ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಗಳಾದ ಎನ್.ಎಸ್. ಸಂಜಯ್ ಗೌಡ ಅವರು ಚಾಲನೆ ನೀಡಿದರು.
ನಗರದ ಕೋಟೆ ಆವರಣದಲ್ಲಿ ರುವ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ ಹೈಕೋರ್ಟ್ ನ್ಯಾಯಾಧೀಶರು, ಕೆಲವು ಪ್ರಕರಣಗಳ ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಭೂ ವಿವಾದ, ವಿಮೆ ಸಿಗದ ಬಗ್ಗೆ ಹೆಚ್ಚಿನ ಪ್ರಕರಣಗಳು ವಿಚಾರಣೆಗೆ ಬಂದಿತ್ತು. ಮೊದಲ ಬಾರಿ ಜಿಲ್ಲಾ ನ್ಯಾಯಾಲಯ ದಲ್ಲಿ ಹೈಕೋರ್ಟ್ ನ್ಯಾಯಾಧೀಶರು ಪ್ರಕರಣ ಇತ್ಯರ್ಥಪಡಿಸುವ ಅಪರೂಪದ ಘಟನೆ ವಕೀಲರಿಗೆ ಖುಷಿ ನೀಡಿತು. ಮೊದಲು ವಾದಿ, ಪ್ರತಿವಾದಿ ಜೊತೆಗೆ ವಕೀಲರನ್ನು ಕರೆಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಒಪ್ಪಿಗೆ ಇದೆಯಾ.? ಎಂದು ಕೇಳಿದ ನಂತರ ಪ್ರಕರಣವನ್ನು ಹೇಗೆ ಬಗೆಹರಿಸಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚಿಸಿ ಉಭಯ ಕಡೆಯವರು ಒಪ್ಪಿದ ನಂತರ ಅದನ್ನು ದಾಖಲಿಸಿಕೊಂಡು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲಾಯಿತು.
ವಿಮೆ ಕಂಪೆನಿಯಿAದ ಬಂದ ಹಣವನ್ನು ಯಾವ ರೀತಿ ಉಪಯೋಗಿಸುವುದರ ವೃದ್ಧ ದಂಪತಿಗೆ ನ್ಯಾಯಾಧೀಶರೇ ಸಲಹೆ ನೀಡಿದ್ದು, ವಿಶೇಷವಾಗಿತ್ತು. ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಕೆಲವರು ಗೊಂದಲದಿAದ ಗೈರಾಗಿದ್ದರು. ಆದರೆ, ಅದಾಲತ್‌ನಲ್ಲಿ ಭಾಗವಹಿಸುವವರು ಸಂಚರಿಸಲು ವಿನಾಯಿತಿ ನೀಡಲಾಗಿತ್ತು.
ಈ ಸಂದರ್ಭ ಜಿಲ್ಲಾ ನ್ಯಾಯಾಧೀಶರಾದ ಜಿನರಾಳ್ಕರ್ ಭೀಮರಾವ್ ಲಗಮಪ್ಪ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಬ್ರಮಣ್ಯ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಪಿ.ಎಸ್. ಚಂದ್ರಶೇಖರ್, ಹಿರಿಯ ಸಿವಿಲ್ ನ್ಯಾಯಾಧೀಶೆ ಕೆ. ರೂಪ, ನ್ಯಾಯಾಧೀಶರಾದ ಮನು, ಸ್ಮಿತಾ, ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ, ಉಪಾಧ್ಯಕ್ಷ ಕೆ.ಎಸ್. ತಮ್ಮಯ್ಯ, ಕಾರ್ಯದರ್ಶಿ ಎಂ.ಕೆ. ಅರುಣ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಬಳಿಕ ವಿದ್ಯಾನಗರದಲ್ಲಿ ನಿರ್ಮಾಣವಾಗುತ್ತಿ ರುವ ನೂತನ ನ್ಯಾಯಾಲಯ ಕಟ್ಟಡವನ್ನು ಪರಿಶೀಲನೆ ನಡೆಸಿದರು.