ಸೋಮವಾರಪೇಟೆ, ಆ. ೧೪: ತಾಲೂಕಿನಲ್ಲಿರುವ ಪ್ರವಾಸಿತಾಣ ಮಲ್ಲಳ್ಳಿ, ಪುಷ್ಪಗಿರಿಗೆ ಆಗಮಿಸುವ ಪ್ರವಾಸಿಗರ ವಾಹನಗಳು ಅತೀವೇಗ ಹಾಗೂ ಅಜಾಗರೂಕತೆಯಿಂದ ಸಂಚರಿಸುತ್ತಿರುವುದರಿAದ ಅಪಘಾತಗಳು ಹೆಚ್ಚಾಗುತ್ತಿದ್ದು, ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ ಆಗ್ರಹಿಸಿದೆ. ಶಾಂತಳ್ಳಿ ಗ್ರಾಮದ ಗಿರೀಶ್ ಎಂಬವರ ಬೈಕ್ಗೆ ಪ್ರವಾಸಿಗರ ವಾಹನ ಡಿಕ್ಕಿಯಾದ ಪರಿಣಾಮ ಕೈ ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಯಾವುದೇ ಸುಳಿವು ಲಭಿಸಿಲ್ಲ. ಹೊರಜಿಲ್ಲೆಯಿಂದ ಕೆಲವರು ಮೋಜು, ಮಸ್ತಿಗಾಗಿ ಬರುತ್ತಿದ್ದಾರೆ. ಪಾನಮತ್ತರಾಗಿ ಪಾದಚಾರಿಗಳ ಮೇಲೆ ಡಿಕ್ಕಿಪಡಿಸಿ ಹೋಗುತ್ತಿದ್ದಾರೆ. ಅಂತಹ ವಾಹನಗಳನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಸಂಘದ ಪದಾಧಿಕಾರಿಗಳಾದ ಎ.ಆರ್. ಕುಶಾಲಪ್ಪ, ಯು.ಯು. ಸುರೇಶ್, ಯು.ಎಂ. ಬಸವರಾಜ್, ಸಿ.ಎಂ. ಸೋಮಯ್ಯ, ಯು.ಎಂ. ಬಿದ್ದಪ್ಪ, ಹೆಚ್.ಎಸ್. ರಾಜು, ಡಿ.ಪಿ. ದಯಾನಂದ ಈ ಸಂದರ್ಭ ಇದ್ದರು.