ಗೋಣಿಕೊಪ್ಪ ವರದಿ, ಆ. ೧೪: ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪುತ್ತರಿ ರೈತ ಉತ್ಪಾದಕ ಸಂಸ್ಥೆಗೆ ಚಿತ್ರದುರ್ಗ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿ ಮಾಹಿತಿ ಪಡೆದರು.

ಚಿತ್ರದುರ್ಗ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಹನುಮಂತಪ್ಪ ಅವರೊಂದಿಗೆ ೪ ವಿಜ್ಞಾನಿಗಳು ಭಾಗವಹಿಸಿದ್ದರು. ರೈತ ಉತ್ಪಾದಕರ ಸಂಸ್ಥೆ ಅನುಷ್ಠಾನ ಮಾಡುವುದು, ರೈತರ ಒಗ್ಗೂಡಿಸುವಿಕೆ, ಕೃಷಿ ಪರಿಕರ ಮಾರಾಟ, ಖರೀದಿ, ಮಾರುಕಟ್ಟೆ ವ್ಯವಸ್ಥೆ ನಡೆಸುವ ಬಗ್ಗೆ ಮಾಹಿತಿ ಕಲೆ ಹಾಕಿದರು. ನಬಾರ್ಡ್ ವತಿಯಿಂದ ಆರ್ಥಿಕ ಯೋಜನೆ ಪಡೆಯುವ ಬಗ್ಗೆ ಸಲಹೆ ನೀಡಲಾಯಿತು. ಚಿತ್ರದುರ್ಗದಲ್ಲಿ ರೈತ ಉತ್ಪಾದಕ ಸಂಸ್ಥೆ ಅಸ್ಥಿತ್ವಕ್ಕೆ ತರಲಾಗುವುದು ಎಂದು ಚಿತ್ರದುರ್ಗ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಹನುಮಂತಪ್ಪ ಈ ಸಂದರ್ಭ ಮಾಹಿತಿ ನೀಡಿದರು.

ಗೋಣಿಕೊಪ್ಪ ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾಜ್, ವಿಜ್ಞಾನಿಯಾದ ಡಾ. ವೀರೇಂದ್ರಕುಮಾರ್, ಡಾ. ಪ್ರಭಾಕರ್, ಡಾ. ದೇವಯ್ಯ, ಪುತ್ತರಿ ರೈತ ಉತ್ಪಾಕರ ಸಂಸ್ಥೆ ಸಿಇಒ ಹೊಟ್ಟೇಂಗಡ ರಾಣಾ ಪೊನ್ನಣ್ಣ ಉಪಸ್ಥಿತರಿದ್ದರು.