ಮಡಿಕೇರಿ, ಆ. ೧೪: “ಪರಿವರ್ತನಾ ವೇದಿಕೆ ಕೊಡಗು” ಎಂಬ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ವಕೀಲ ಕುಂಞÂ ಅಬ್ದುಲ್ಲ ಅವರು ವೇದಿಕೆಯ ಜಿಲ್ಲಾ ಸಂಯೋಜಕರಾಗಿ ಆಯ್ಕೆಯಾದರು. ನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವ ಸಂಯೋಜಕರಾಗಿ ಹೆಚ್.ಎಂ.ನAದಕುಮಾರ್, ಕೆ.ಕೆ.ಮಂಜುನಾಥ್ ಕುಮಾರ್, ಉಪ ಸಂಯೋಜಕರಾಗಿ ಭರತ್ ಕುಮಾರ್, ಡಿ.ಎನ್.ಲಿಂಗರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಮೊಳ್ಳೆಕುಟ್ಟಂಡ ದಿನುಬೋಜಪ್ಪ, ಸಹ ಕಾರ್ಯದರ್ಶಿಯಾಗಿ ಅಜಿತ್ ಕೊಟ್ಟಕೇರಿಯನ, ಜನಾರ್ಧನ ಹಾಗೂ ಖಜಾಂಚಿಯಾಗಿ ಗೌತಮ್ ಶಿವಪ್ಪ ನೇಮಕಗೊಂಡರು.

ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಂಥೋಣಿ, ಪ್ರೇಮ್ ಕುಮಾರ್, ರಫೀಕ್ ಖಾನ್, ಸೀದಿ ಇಬ್ರಾಹಿಂ, ಮೊಹಮ್ಮದ್ ಮುಸ್ತಫ, ಶಿವಪ್ಪ ವಿರಾಜಪೇಟೆ, ಶರೀಫ್ ಸುಂಟಿಕೊಪ್ಪ, ರೆಹನಾ ಸುಲ್ತಾನ್, ತಾರಾಮಣಿ, ಅಶ್ರಫ್ ಎಮ್ಮೆಮಾಡು, ಮೋಹನ್ ಮೌರ್ಯ, ಅರ್ಜುನ್ ಮಡಿಕೇರಿ, ಸುಂದರ ಅವರುಗಳು ಆಯ್ಕೆಯಾದರು. ಸಭೆಯಲ್ಲಿ ಧರ್ಮ ರಹಿತ ಮತ್ತು ರಾಜಕೀಯ ರಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.