ಮಡಿಕೇರಿ, ಆ. ೧೪: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ಅಧ್ಯಕ್ಷರಾಗಿ ಪಿ.ಎಂ. ಸುರೇಶ್ ಆಯ್ಕೆಯಾದರು. ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಾಧ್ಯಕ್ಷರಾಗಿ ಪಿ.ಟಿ. ಪೊನ್ನಪ್ಪ, ಮಹಿಳಾ ಉಪಾಧ್ಯಕ್ಷೆಯಾಗಿ ಬಿ.ಜೆ. ಶಾರದ, ಕಾರ್ಯದರ್ಶಿಯಾಗಿ ಕೆ.ಬಿ. ಆದಿತ್ಯ, ಸಹ ಕಾರ್ಯದರ್ಶಿಯಾಗಿ ಕೆ.ಟಿ. ತೀರ್ಥೇಶ್, ಖಜಾಂಚಿಯಾಗಿ ಕೆ.ಎನ್. ಅವಿನಾಶ್, ಸಹ ಖಜಾಂಚಿಯಾಗಿ ಕೆ.ಬಿ. ಅರ್ಜುನ್, ಕ್ರೀಡಾ ಕಾರ್ಯದರ್ಶಿಯಾಗಿ ಕೆ.ಟಿ. ಯೋಗೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬಿ.ಎಂ. ಶಿವಕಾಂತ್, ಸಲಹೆಗಾರರಾಗಿ ಬಿ.ಎಸ್. ಜಯಪ್ಪ, ಸಿ.ಕೆ. ಮಂಜು, ಬಿ.ಕೆ. ಮೋಣಪ್ಪ, ವಿ.ಟಿ. ಗೋಪಾಲಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು.

ನಂತರ ನಡೆದ ೨೯ನೇ ವರ್ಷದ ಗೌರಿ ಗಣೇಶೋತ್ಸವದ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಎಂ.ಎನ್. ಹರೀಶ್ ಕುಮಾರ್, ಉಪಾಧ್ಯಕ್ಷರಾಗಿ ಕೆ.ಎಸ್. ಭರತ್, ಕಾರ್ಯದರ್ಶಿಯಾಗಿ ಪಿ.ಟಿ. ಪೊನ್ನಪ್ಪ ಹಾಗೂ ಕೆ.ಟಿ. ಯೋಗೇಶ್ ಅವರನ್ನು ಆಯ್ಕೆ ಮಾಡಲಾಯಿತು. ಸಿ.ಕೆ. ಮಂಜು ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸ್ಥಾಪಕ ಅಧ್ಯಕ್ಷ ಬಿ.ಎಸ್. ಜೋಯಪ್ಪ ಉಪಸ್ಥಿತರಿದ್ದರು. ಕಾರ್ಯಕ್ರವನ್ನು ಹೆಚ್.ಎಂ. ಲಕ್ಷ್ಮಣ್ ಸ್ವಾಗತಿಸಿದರು. ಸಿ.ಎಂ. ನಿಕೇಶ್ ನಿರೂಪಿಸಿದರು. ಆದಿತ್ಯ ಕೆ.ಬಿ. ವಂದಿಸಿದರು.