ಶನಿವಾರಸಂತೆ, ಆ. ೧೪: ಪಂಪ್‌ಸೆಟ್‌ಗಳ ಬಾಕಿ ಹಣವನ್ನು ಬೆಳೆಗಾರರು ಸಾಧ್ಯವಾದಷ್ಟು ಪಾವತಿಸಿ ಎಂದು ಶನಿವಾರಸಂತೆ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷö್ಮಣ್ ಹಾಗೂ ಪದಾಧಿಕಾರಿಗಳು ಬೆಳೆಗಾರರಿಗೆ ಮನವಿ ಮಾಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು, ಕೆಲವು ಬೆಳೆಗಾರರ ಕೊಳವೆ ಬಾವಿ ಮೋಟಾರ್ ಬಿಲ್ ಲಕ್ಷಗಟ್ಟಲೆ ಬಾಕಿ ಇದೆ. ಪೂರ್ತಿ ಕಂದಾಯ ಪಾವತಿ ಮಾಡಲು ಸಾಧ್ಯವಾಗದಿದ್ದರೆ ಸಮಯಾವಕಾಶ ತೆಗೆದುಕೊಂಡು ಕಂತುಗಳಲ್ಲಿ ಪಾವತಿ ಮಾಡಲು ವಿನಂತಿಸಿಕೊAಡು ಮುಂದಿನ ಜನವರಿಯಲ್ಲಿ ಪೂರ್ಣ ಬಿಲ್ ಪಾವತಿಸಬಹುದು. ಈ ವಿಚಾರವಾಗಿ ಈಗಾಗಲೇ ವಿದ್ಯುತ್ ಇಲಾಖೆ ಅಧಿಕಾರಿಗಳು ಪ್ರಸ್ತಾಪ ಮಾಡಿ ಕೋರಿದ್ದಾರೆ. ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಳೆ- ಗಾಳಿ ಲೆಕ್ಕಿಸದೇ ಹಗಲು -ರಾತ್ರಿಯೆನ್ನದೇ ವಿದ್ಯುತ್ ವ್ಯತ್ಯಯವಾಗದಂತೆ ಶ್ರಮಿಸುತ್ತಿದ್ದಾರೆ. ಎಲ್ಲಾ ಬೆಳೆಗಾರರು ವಿದ್ಯುತ್ ಬಿಲ್ ಕಟ್ಟುವ ಮೂಲಕ ಇಲಾಖೆಯೊಂದಿಗೆ ಕೈಜೋಡಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.