ಡಾ. ಅಶೋಕ್

*ಗೋಣಿಕೊಪ್ಪ, ಆ. ೧೪: ತಾಯಿಯ ಎದೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಮಗುವಿನ ಆರೋಗ್ಯ ವೃದ್ಧಿಸಲು ಮತ್ತು ಚುರುಕುತನ ಹೊಂದಲು ಸಹಕಾರಿಯಾಗಬಲ್ಲದು ಎಂದು ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ್ ಹೇಳಿದರು. ನಿಟ್ಟೂರು ಗ್ರಾ.ಪಂ. ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸರಗೂರು ಮತ್ತು ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ತಾಯಿಯ ಎದೆ ಹಾಲಿನ ಮಹತ್ವದ ಬಗ್ಗೆ ತಿಳಿಸಿದರು. ಸರಗೂರು ಸ್ವಾಮಿ ವಿವೇಕಾನಂದ ಆಸ್ಪತ್ರೆಯ ನಿರ್ದೇಶಕ ಡಾ. ಡೆನ್ನಿಸ್ ಡಿ. ಚೌಹನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಉಪಾಧ್ಯಕ್ಷೆ ಪಡಿಞõÁರಂಡ ಕವಿತಾಪ್ರಭು, ಸದಸ್ಯರಾದ ಶರೀನ್ ಮುತ್ತಣ್ಣ, ಪವಿತ್ರ, ಬಾಳೆಲೆ ಆರೋಗ್ಯ ಕೇಂದ್ರದ ಡಿ.ಹೆಚ್.ಇ.ಓ ತೇಜಸ್ವಿ, ವಿವೇಕಾ ನಂದ ಯೂತ್ ಮೂವ್‌ಮೆಂಟ್ ಕಾರ್ಯಕ್ರಮ ವ್ಯವಸ್ಥಾಪಕರು ಕುಸುಮಾ, ಮೇಲ್ವಿಚಾರಕರುಗಳಾದ ಕೀರ್ತಿ, ಗಾಯಿತ್ರಿ, ಸೆಲಿನಿ, ಶಾಲಿನಿ, ಗೌತಮ್, ಶೃತೇಶ್, ತಾನೇಶ್, ಮನು, ರಕ್ಷಿತಾ, ಅನಿಲ್‌ಕುಮಾರ್, ವೆಂಕಟೇಶ್, ಸುಮನ್ ಸೇರಿದಂತೆ ಹಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.