ಮಡಿಕೇರಿ, ಆ. ೧೩: ಮಡಿಕೇರಿ ನಗರ ಸಭೆಯ ಆಯುಕ್ತರನ್ನು ಅಮಾನತ್ತುಗೊಳಿಸಿ ಅವರ ಅವಧಿಯಲ್ಲಿ ಆದ ಎಲ್ಲಾ ಅನುಮತಿಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಕೊಡಗು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಕೊಡಗು ಜಿಲ್ಲಾಧಿಕಾರಿಗಳಾದ ಚಾರುಲತಾ ಸೋಮಲ್ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನೀರಾ ಮೈನಾ ಅವರು ಇತ್ತೀಚೆಗೆ ಮಡಿಕೇರಿ ನಗರದಲ್ಲಿ ಬಹು ಚರ್ಚಿತವಾಗುತ್ತಿರುವ ಕಾವೇರಿ ಚಿತ್ರ ಮಂದಿರದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಂಬAಧಿಸಿದAತೆ ಆಯುಕ್ತರು ವಿಭಿನ್ನ ರೀತಿಯ ನೋಟೀಸ್, ಪರವಾನಗಿಗಳನ್ನು ನೀಡಿ ಗೊಂದಲ ಮೂಡಿಸುತ್ತಿದ್ದು ಇವುಗಳ ತನಿಖೆಗೆ ಜಿಲ್ಲ್ಲಾಧಿಕಾರಿಗಳನ್ನು ಮನವಿ ಮಾಡಿದ್ದಾರೆ. ಅಲ್ಲದೆ ೧೯ನೇ ಬ್ಲಾಕ್ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಅನುಮತಿ ಇಲ್ಲದೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ನಗರಸಭೆಗೆ ಆದಾಯ ನಷ್ಟವಾಗಿದ್ದು, ಆಯುಕ್ತರು ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಲ್ಲಿಂದ ಇಲ್ಲಿಯವರೆಗೆ ನೀಡಿದ ಎಲ್ಲಾ ಆದೇಶ ಮತ್ತು ಅನುಮತಿಗಳ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ತೆನ್ನೀರಾ ಮೈನಾ ಲಿಖಿತ ಮನವಿಯಲ್ಲಿ ಕೋರಿದ್ದಾರೆ.

ಜಿಲ್ಲಾಧಿಕಾರಿಗಳು ಎಲ್ಲವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.