ನವದೆಹಲಿ, ಆ. ೧೨: ಒಲಂಪಿಕ್ಸ್ನಲ್ಲಿ ಭಾರತಕ್ಕೆ ೨ನೇ ವೈಯಕ್ತಿಕ ಚಿನ್ನದ ಪದಕ ಹಾಗೂ ಅಥ್ಲೆಟಿಕ್ಸ್ನಲ್ಲಿ ಮೊದಲನೆಯ ಚಿನ್ನ ತಂದುಕೊಟ್ಟ ಸುಬೇದಾರ್ ನೀರಜ್ ಚೋಪ್ರಾ ಅವರಿಗೆ ನವದೆಹಲಿಯ ರಜಪುತಾನಾ ರೈಫಲ್ಸ್ನ ರೆಜಿಮೆಂಟಲ್ ಕೇಂದ್ರದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಜಪುತಾನ ರೈಫಲ್ಸ್ನ ೪ನೇ ಬೆಟಾಲಿಯನ್ಗೆ ಸೇರಿರುವ ಜಿಲ್ಲೆಯವರಾದ ಲೆಫ್ಟಿನೆಂಟ್ ಜನರಲ್ ಕೋದಂಡ ಪಿ.ಕಾರ್ಯಪ್ಪ ಹಾಗೂ ಬೆಟಾಲಿಯನ್ನ ಕರ್ನಲ್ ಆಗಿರುವ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ಧಿಲನ್ ಅವರುಗಳು ಇದೇ ಬೆಟಾಲಿಯನ್ಗೆ ಸೇರಿರುವ ಸುಬೇದಾರ್ ನೀರಜ್ ಚೋಪ್ರಾ ಅವರಿನ್ನು ಗೌರವಿಸಿದರು.