ಮಡಿಕೇರಿ, ಆ. ೧೨: ನಿನ್ನೆ ರಾತ್ರಿ ವೇಳೆ ಚೈನ್‌ಗೇಟ್ ಬಳಿ ಅಪರಿಚಿತ ವಾಹನ ಹರಿದು ಮಹಿಳೆಯೋರ್ವರು ಧಾರುಣವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿ ನಗರ ಹಾಗೂ ಸಂಚಾರಿ ಪೊಲೀಸರು ರಸ್ತೆ ಬದಿ ಅಳವಡಿಸಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡುವ ಮೂಲಕ ವಾಹನವನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ.

ಆದರೆ ಚೈನ್‌ಗೇಟ್‌ನಲ್ಲಿರುವ ಕ್ಯಾಮರಾ ಕೆಟ್ಟು ನಿಂತಿದ್ದು, ಪತ್ತೆ ಕಾರ್ಯ ಕಬ್ಬಿಣದ ಕಡಲೆಯಂತಾಗಿದೆ. ನಿನ್ನೆ ರಾತ್ರಿ ೧೦ ಗಂಟೆ ವೇಳೆಗೆ ಚೈನ್‌ಗೇಟ್ ಬಳಿ ವಾಹನ ಹರಿದು ಮಂಗಳಾದೇವಿನಗರದ ನಿವಾಸಿ ಭಾಮಾವತಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಸ್ತೆ ಬದಿಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆ ನಡೆದ ಸ್ಥಳದ ಸನಿಹದಲ್ಲಿರುವ ಖಾಸಗಿ ಹೊಟೇಲ್‌ವೊಂದರ ಬಳಿ ಅಳವಡಿಸಿರುವ ಕ್ಯಾಮರಾವನ್ನು ಪರಿಶೀಲಿಸಿದಾಗ ಘಟನೆ ನಡೆದ ಸಮಯದಲ್ಲಿ ಮೂರು ಟ್ಯಾಂಕರ್‌ಗಳು ಹಾದು ಹೋಗಿರುವುದು ಕಂಡುಬAದಿದೆ. ಸಂಪಿಗೆಕಟ್ಟೆ ಬಳಿಯ ಹೊಟೇಲ್‌ನಲ್ಲಿನ ಕ್ಯಾಮರಾ ಪರಿಶೀಲಿಸಿದಾಗಲೂ ಹಲವಾರು ವಾಹನಗಳು ಹೋಗಿರುವುದು ಕಂಡುಬAದಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಘಟನೆ ನಡೆದ ಸ್ಥಳದಲ್ಲಿನ ಮಾಹಿತಿ ಲಭ್ಯವಾಗಿರಲಿಲ್ಲ. ಆದರೂ ಪ್ರಯತ್ನದಲ್ಲಿದ್ದೇವೆ ಎಂದು ಸಂಚಾರಿ ಪೊಲೀಸ್ ಠಾಣಾಧಿಕಾರಿ ಬೆಳ್ಯಪ್ಪ ತಿಳಿಸಿದ್ದಾರೆ.

ಕೆಟ್ಟು ನಿಂತಿರುವ ಕ್ಯಾಮರಾ...!

ಘಟನೆ ನಡೆದ ಚೈನ್‌ಗೇಟ್ ಜಂಕ್ಷನ್‌ನಲ್ಲಿ ಜಿಲ್ಲಾಡಳಿತದ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಭಿಮುಖವಾಗಿಯೇ ಈ ಕ್ಯಾಮರಾ ಇದೆ. ಆದರೆ ಅದು ಕೆಟ್ಟು ನಿಂತಿದೆ...! ಈ ಕ್ಯಾಮರಾ ಚಾಲೂ ಇದ್ದಿದ್ದರೆ ಅಪಘಾತ ಮಾಡಿದ ವಾಹನವನ್ನು ಸುಲಭವಾಗಿ ಪತ್ತೆ ಹಚ್ಚ ಬಹುದಾಗಿತ್ತು.

ಆದರೆ ಕ್ಯಾಮರಾ ಕೆಟ್ಟಿರುವು ದರಿಂದ ಯಾವ ವಾಹನವೆಂದು ಕಂಡು ಹಿಡಿಯಲು ಕಷ್ಟ ಸಾಧ್ಯ. ಅಲ್ಲದೆ, ಇದೀಗ ರಾತ್ರಿ ವೇಳೆ ಸಾಲು - ಸಾಲಾಗಿ ಭಾರೀ ವಾಹನಗಳು ಸಂಚರಿಸುತ್ತವೆ. ನಿನ್ನೆ ರಾತ್ರಿ ಕೂಡ ಘಟನೆ ನಡೆದ ಸಂದರ್ಭದಲ್ಲಿ ಸಾಲುಗಟ್ಟಲೆ ಭಾರಿ ಟ್ಯಾಂಕರ್‌ಗಳು, ಬಸ್‌ಗಳು ಸಂಚರಿಸುತ್ತಿದ್ದವು. ಇವುಗಳಲ್ಲಿ ಯಾವುದೆಂದು ಪತ್ತೆ ಹಚ್ಚುವುದು...? ಪೊಲೀಸರಿಗೆ ಈ ಪ್ರಕರಣ ಒಂದು ತಲೆನೋವಾಗಿ ಪರಿಣಮಿಸಿದೆ. -ಸಂತೋಷ್