ಸೋಮವಾರಪೇಟೆ, ಆ. ೧೨: ಬೇಸಿಗೆಯಲ್ಲಿ ಕಾಫಿ ಗಿಡಗಳನ್ನು ಉಳಿಸಿಕೊಳ್ಳಲು ಮೂರು ತಿಂಗಳ ಕಾಲ ಪಂಪ್‌ಸೆಟ್‌ಗಳ ಮೂಲಕ ನೀರು ಹಾಯಿಸುತ್ತಿದ್ದು, ಇದಕ್ಕೆ ಸಂಪರ್ಕ ಕಲ್ಪಿಸಿರುವ ವಿದ್ಯುತ್‌ನ್ನು ಅಧಿಕಾರಿಗಳು ಸ್ಥಗಿತಗೊಳಿಸಲು ಮುಂದಾದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದು ಬೆಳೆಗಾರರು ಎಚ್ಚರಿಸಿದ್ದಾರೆ.

ಕಾಫಿ ಬೆಳೆಗಾರರು ಉಪಯೋಗಿ ಸುತ್ತಿರುವ ವಿದ್ಯುತ್‌ಚಾಲಿತ ಪಂಪ್ ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಸೆಸ್ಕ್ ಮುಂದಾದರೆ, ಸಂಪರ್ಕ ಕಡಿತ ಮಾಡಲು ಬರುವ ಸಿಬ್ಬಂದಿಗಳನ್ನೇ ಕಂಬಕ್ಕೆ ಕಟ್ಟಿ ಹಾಕಲು ಬೆಳೆಗಾರರು ಮುಂದಾಗಬೇಕಾಗುತ್ತದೆ. ಸೋಮವಾರಪೇಟೆ, ಆ. ೧೨: ಬೇಸಿಗೆಯಲ್ಲಿ ಕಾಫಿ ಗಿಡಗಳನ್ನು ಉಳಿಸಿಕೊಳ್ಳಲು ಮೂರು ತಿಂಗಳ ಕಾಲ ಪಂಪ್‌ಸೆಟ್‌ಗಳ ಮೂಲಕ ನೀರು ಹಾಯಿಸುತ್ತಿದ್ದು, ಇದಕ್ಕೆ ಸಂಪರ್ಕ ಕಲ್ಪಿಸಿರುವ ವಿದ್ಯುತ್‌ನ್ನು ಅಧಿಕಾರಿಗಳು ಸ್ಥಗಿತಗೊಳಿಸಲು ಮುಂದಾದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದು ಬೆಳೆಗಾರರು ಎಚ್ಚರಿಸಿದ್ದಾರೆ.

ಕಾಫಿ ಬೆಳೆಗಾರರು ಉಪಯೋಗಿ ಸುತ್ತಿರುವ ವಿದ್ಯುತ್‌ಚಾಲಿತ ಪಂಪ್ ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಸೆಸ್ಕ್ ಮುಂದಾದರೆ, ಸಂಪರ್ಕ ಕಡಿತ ಮಾಡಲು ಬರುವ ಸಿಬ್ಬಂದಿಗಳನ್ನೇ ಕಂಬಕ್ಕೆ ಕಟ್ಟಿ ಹಾಕಲು ಬೆಳೆಗಾರರು ಮುಂದಾಗಬೇಕಾಗುತ್ತದೆ. ರಾಜೇಶ್, ರಾಜ್ಯದಲ್ಲಿ ಭತ್ತ, ರಾಗಿ, ತೆಂಗು, ಅಡಿಕೆ ಸೇರಿದಂತೆ ಇನ್ನಿತರ ಸಿರಿಧಾನ್ಯ ಬೆಳೆಯುವ ಕೃಷಿಕರಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡದೆ ಅನ್ಯಾಯ ಮಾಡಿದೆ. ಅಕಾಲಿಕ ಮಳೆ, ಪ್ರಕೃತಿ ವಿಕೋಪದಿಂದ

(ಮೊದಲ ಪುಟದಿಂದ) ಜಿಲ್ಲೆಯ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಉಚಿತ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.ಕಾಫಿಯನ್ನು ವಾಣಿಜ್ಯ ಬೆಳೆ ಎಂದು ಪರಿಗಣಿಸಿರುವುದು ಸರಿಯಲ್ಲ. ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ನೆಪವೊಡ್ಡಿ ಸೆಸ್ಕ್ ಅಧಿಕಾರಿಕಾರಿಗಳು ಕೆಲ ರೈತರ ವಿದ್ಯುತ್ ಸಂಪರ್ಕವನ್ನು ಈಗಾಗಲೇ ಕಡಿತಗೊಳಿಸಿದ್ದಾರೆ. ಅತಿಯಾದ ಮಳೆಯಿಂದ ಕಾಫಿ ತೋಟಗಳಿಗೆ ಕೊಳೆರೋಗ ವ್ಯಾಪಕವಾಗಿದೆ. ಈಗ ಕೀಟ ಹಾಗೂ ಶಿಲೀಂದ್ರನಾಶಕ ಸಿಂಪಡಿಸಬೇಕಾಗಿದೆ. ಕೂಡಲೆ ರೈತರಿಗೆ ವಿದ್ಯುತ್ ಸಂಪರ್ಕ ನೀಡಬೇಕು. ಅಲ್ಲದೆ ಸಂಪರ್ಕ ಕಡಿತಗೊಳಿಸು ವುದನ್ನು ನಿಲ್ಲಿಸಬೇಕು. ತಪ್ಪಿದಲ್ಲಿ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸ ಲಾಗುವುದು ಎಂದು ಎಚ್ಚರಿಸಿದರು.

ಬೇಸಿಗೆಯಲ್ಲಿ ೩ ತಿಂಗಳ ಕಾಲ ಮಾತ್ರ ಕಾಫಿ ತೋಟಗಳಿಗೆ ಬೆಳೆಗಾರರು ನೀರು ಹಾಯಿಸುತ್ತಾರೆ. ಉಳಿದಂತೆ ಶಿಲೀಂದ್ರ ನಾಶಕ ಸಿಂಪಡಣೆಗೆ ಮಾತ್ರ ನೀರು ಬಳಸುತ್ತಾರೆ. ಶೇ.೦.೦೫ರಷ್ಟು ವಿದ್ಯುತ್ ನ್ನು ಬೆಳೆಗಾರರು ಬಳಸುತ್ತಿದ್ದು, ಇದೀಗ ಅದನ್ನೂ ಕಿತ್ತುಕೊಳ್ಳಲು ಇಲಾಖೆ ಮುಂದಾಗಿದೆ ಎಂದು ಆರೋಪಿಸಿದರು.

ಸರ್ಕಾರಗಳು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ದೇಶದ ಬೆನ್ನೆಲುಬು ರೈತರು ಎನ್ನುತ್ತ ಬೆನ್ನು ಮೂಳೆಯನ್ನು ಮುರಿಯುವ ಮಸೂದೆಗಳನ್ನು ಜಾರಿಗೆ ತರುತ್ತಿವೆ. ಉಚಿತ ವಿದ್ಯುತ್, ಸರ್ಕಾರದ ಸಹಾಯಧನದಿಂದ ರೈತರು ಆಹಾರ ಬೆಳೆಗಳನ್ನು ಉತ್ಪಾದಿಸುತ್ತಿದ್ದರು. ಈಗ ವಿದ್ಯುತ್ ಖಾಸಗೀಕರಣಗೊಳಿಸಲು ಮುಂದಾಗಿ ರೈತರನ್ನು ನಾಶ ಮಾಡಲು ಹೊರಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ಹೋರಾಟಕ್ಕೆ ಧುಮುಕದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಹೇಳಿದರು.

ಕಾಫಿ ಬೆಳೆಯನ್ನು ಕೃಷಿ ವಲಯಕ್ಕೆ ಸೇರಿಸದಿದ್ದರೆ, ಸರ್ಕಾರದ ಸೌಲಭ್ಯ ವಿಲ್ಲದೆ, ನಿರ್ವಹಣೆ ಅಸಾಧ್ಯವಾಗಿ ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಕಾಫಿ ತೋಟಗಳೇ ನಾಶವಾಗಿ, ವಿದೇಶಿ ವಿನಿಮಯಕ್ಕೆ ದೊಡ್ಡ ಮಟ್ಟದ ಹೊಡೆತ ಬೀಳಲಿದೆ ಎಂದು ಕರ್ನಾಟಕ ರೈತಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಹೇಳಿದರು. ದೊಡ್ಡಮಳ್ತೆ, ಗೌಡಳ್ಳಿ ಪಂಚಾಯಿತಿ ವ್ಯಾಪ್ತಿಯ ರೈತ ಹೋರಾಟ ಸಮಿತಿಯ ಸಂಚಾಲಕ ಜಿ.ಎಂ. ಹೂವಯ್ಯ ಮಾತನಾಡಿ, ಸಣ್ಣ ಕಾಫಿ ಬೆಳೆಗಾರರ ವಿದ್ಯುತ್‌ಚಾಲಿತ ೧೦ ಹೆಚ್‌ಪಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸರ್ಕಾರ ನೀಡಲಿದೆ ಎಂದು ಹಿಂದಿನ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಬೆಳೆಗಾರರಿಗೆ ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರಿಲ್ಲ. ಈಗ ಸೆಸ್ಕ್ ಅಧಿಕಾರಿಗಳು, ಸಂಪರ್ಕ ಕಡಿತಗೊಳಿಸಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ರೈತರ ತಾಳ್ಮೆಯನ್ನು ಅಸಹಾಯಕತೆ ಎಂದು ಭಾವಿಸಬಾರದು ಎಂದರು.

ಮುಂದಿನ ೫ ದಿನಗಳ ಒಳಗೆ ಕಡಿತ ಮಾಡಿರುವ ಬೆಳೆಗಾರರಿಗೆ ವಿದ್ಯುತ್ ಸಂಪರ್ಕವನ್ನು ಮತ್ತೆ ಕಲ್ಪಿಸಬೇಕು. ಮುಂದಿನ ದಿನಗಳಲ್ಲಿ ಯಾವ ರೈತರ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸ ಬಾರದು. ತಪ್ಪಿದ್ದಲ್ಲಿ ಜಿಲ್ಲಾಧ್ಯಂತ ಹೋರಾಟ ಸಂಘಟಿಸಲಾಗುವುದು. ಮುಂದಿನ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ಚಂಗಪ್ಪ, ಪದಾಧಿಕಾರಿ ಕೆ.ಎಸ್. ಶಾಂತಮಲ್ಲಪ್ಪ, ಕುಶಾಲಪ್ಪ ಉಪಸ್ಥಿತರಿದ್ದರು.