ಚೆಟ್ಟಳ್ಳಿ, ಆ. ೧೦: ಭಾರತದ ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ಕೊಡವರ ಶೌರ್ಯ ಮತ್ತು ಸಾಹಸವನ್ನು ಬಿಂಬಿಸುವ ನೃತ್ಯದ ಪ್ರಕಾರ ಬಿಂಬಿಸುವ ಚಿತ್ರಕಲಾ ಸ್ಪರ್ಧೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಇವರ ವತಿಯಿಂದ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಹಲವು ಬಗೆಯ ಅತ್ಯಾಕರ್ಷಣೀಯ ಚಿತ್ರಗಳನ್ನು ಬಿಡಿಸಿದರು. ಐದರಿಂದ ಹತ್ತನೇ ತರಗತಿಯವರೆಗಿನ ವಿಭಾಗದಲ್ಲಿ ಕಂಬೀರAಡ ಹನ ಅಪ್ಪಯ್ಯ ಪ್ರಥಮ, ಮಿಥಿಲ ಟಿ.ಎಂ. ದ್ವಿತೀಯ, ಕುಂಡ್ಯೋಳAಡ ತಾನಿಶ್ ತಿಮ್ಮಯ್ಯ ತೃತೀಯ, ನಿಹಾರಿಕ ಎ. ವೀಕ್ಷಾ ಪೊನ್ನಮ್ಮ ಐ.ಹೆಚ್., ಯಾನಿಕ ಬೊಳ್ಳಮ್ಮ ಸಿ.ಟಿ. ಅವರುಗಳು ಸಮಾಧಾನಕರ ಬಹುಮಾನ ಪಡೆದುಕೊಂಡರು. ಪಿಯುಸಿಯಿಂದ ಸ್ನಾತಕೋತ್ತರ ವಿಭಾಗವರೆಗಿನ ವಿಭಾಗದಲ್ಲಿ ಕುಮ್ಮಂಡ ರೋಶಿಕ ಚೋಂದಮ್ಮ ಪ್ರಥಮ, ತಾನ್ಯ ಅಯ್ಯಪ್ಪ ಚೆರುವಾಳಂಡ ದ್ವಿತೀಯ, ಪಾಲಂದಿರ ಯಶ್ವಿ ಕಾವೇರಪ್ಪ ತೃತೀಯ, ಭುವನ್ ಗಣಪತಿ ಕೋಳೇರ, ಇಂದAಡ ಸುಹಾನ ಚೆಂಗಪ್ಪ, ರಿಕಿತ್ ಪಾಟಿಲ್ ಅವರುಗಳು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.
-ಪುತ್ತರಿರ ಕರುಣ್ ಕಾಳಯ್ಯ