ರಾಜ್ಯದಲ್ಲಿ ಮತ್ತೆ ಕೊರೊನಾ ಹೆಚ್ಚಳ: ೩೩ ಸಾವು
ಬೆಂಗಳೂರು, ಆ. ೧೧: ಕೊರೊನಾ ಎರಡನೇ ಅಲೆ ನಂತರ ರಾಜ್ಯದಲ್ಲಿ ಕಡಿಮೆಯಾಗಿದ್ದ ಪ್ರಕರಣಗಳ ಸಂಖ್ಯೆ ಇಂದು ಮತ್ತೆ ಏರಿಕೆಯಾಗುತ್ತಿದೆ. ಕಳೆದ ೨೪ ಗಂಟೆಯಲ್ಲಿ ೧,೮೨೬ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ ೨೯,೨೨,೮೭೫ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಮಹಾಮಾರಿಗೆ ೩೩ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೬,೮೮೧ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಇಂದು ೩೭೭ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೩೧,೪೭೪ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ ೫ ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ೧,೬೧೮ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿ ಕೊಂಡವರ ಸಂಖ್ಯೆ ೨೮,೬೩,೧೧೭ಕ್ಕೆ ಏರಿಕೆಯಾಗಿದೆ. ೨೨,೮೫೧ ಸಕ್ರಿಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೬೭,೨೩೭ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೧,೮೨೬ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೧.೦೯ಕ್ಕೆ ಇಳಿದಿದೆ.
ಮುಂಗಾರು ಅಧಿವೇಶನ ಕಾರ್ಯನಿರ್ವಹಿಸಿದ್ದು ೨೧ ಗಂಟೆಗಳು ಮಾತ್ರ
ನವದೆಹಲಿ, ಆ. ೧೧: ಈ ಬಾರಿಯ ಮುಂಗಾರು ಅಧಿವೇಶನದ ಉತ್ಪಾದಕತೆ ತೀವ್ರವಾಗಿ ಕುಸಿತ ಕಂಡಿದ್ದು, ಲೋಕಸಭೆಯ ಸ್ಪೀಕರ್ ಕಲಾಪ ನಡೆದ ಒಟ್ಟು ಗಂಟೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಈ ಬಗ್ಗೆ ಮಾಹಿತಿ ನೀಡಿದ್ದು, ಈವರೆಗೂ ಲೋಕಸಭೆ ಕೇವಲ ೨೧ ಗಂಟೆ ೧೪ ನಿಮಿಷ ಕಾರ್ಯನಿರ್ವಹಣೆ ಮಾಡಿದೆ ಎಂದು ತಿಳಿಸಿದ್ದಾರೆ. ನಿಗದಿತ ೯೬ ಗಂಟೆಗಳ ಪೈಕಿ ೭೪ ಗಂಟೆ ೪೬ ನಿಮಿಷಗಳು ಕಾರ್ಯನಿರ್ವಹಣೆ ಸಾಧ್ಯವಾಗಿಲ್ಲ ಎಂದು ಓಂ ಪ್ರಕಾಶ್ ಬಿರ್ಲಾ ಹೇಳಿದ್ದಾರೆ. ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ೧೭ನೇ ಲೋಕಸಭೆಯ ೬ನೇ ಸೆಷನ್ ಇಂದಿಗೆ ಮುಕ್ತಾಯಗೊಂಡಿದೆ. ಎಲ್ಲಾ ಸಂಸದರನ್ನು ಸಂಸತ್ನ ಸಂಪ್ರದಾಯ ಘನತೆಯನ್ನು ಪಾಲಿಸುವುದಕ್ಕೆ ಒತ್ತಾಯಿಸಿದೆ. ಘೋಷಣೆ ಕೂಗುವುದು, ಬ್ಯಾನರ್ ಹಿಡಿಯುವುದು ನಮ್ಮ ಸಂಸತ್ನ ಸಂಪ್ರದಾಯವಲ್ಲ. ಸಂಸದರು ತಮ್ಮ ಸ್ಥಾನದಿಂದಲೇ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದಿತ್ತು ಎಂದು ಓಂ ಬಿರ್ಲಾ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಕಿನ್ನೌರ್ನಲ್ಲಿ ಭಾರೀ ಭೂಕುಸಿತ
ಶಿಮ್ಲಾ, ಆ. ೧೧: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಬುಧವಾರ ಭಾರೀ ಭೂಕುಸಿತ ಸಂಭವಿಸಿದ್ದು, ಅವಶೇಷಗಳ ಅಡಿಯಲ್ಲಿ ೪೦ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಇದೆ ಎಂದು ಉಪ ಆಯುಕ್ತ ಅಬಿದ್ ಹುಸೇನ್ ಸಾದಿಕ್ ಅವರು ತಿಳಿಸಿದ್ದಾರೆ. ೪೦ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ (ಹೆಚ್ಆರ್ಟಿಸಿ) ಬಸ್ ಸೇರಿದಂತೆ ಹಲವು ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿವೆ ಎಂದು ಸಾದಿಕ್ ಹೇಳಿದ್ದಾರೆ. ಬಸ್ ಕಿನ್ನೌರಿನ ರೆಕಾಂಗ್ ಪಿಯೊದಿಂದ ಶಿಮ್ಲಾಕ್ಕೆ ಹೋಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಸ್ಥಳಕ್ಕೆ ಸೇನೆ, ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ಸ್ಥಳೀಯ ರಕ್ಷಣಾ ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಿನ್ನೌರ್ ಉಪ ಆಯುಕ್ತರು ತಿಳಿಸಿದ್ದಾರೆ. ಕಲ್ಲುಗಳು ಇನ್ನೂ ಬೀಳುತ್ತಿವೆ, ಇದು ರಕ್ಷಣಾ ಕಾರ್ಯಾಚರಣೆಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಸಾದಿಕ್ ಹೇಳಿದ್ದಾರೆ.
ಬಿ.ಎಂ. ಭಾಷಾನ ಮನೆಗೆ ಮುತ್ತಿಗೆ ಯತ್ನ
ಮಂಗಳೂರು, ಆ. ೧೧: ಬಿ.ಎಂ. ಭಾಷಾ ಮನೆಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಮುಖಂಡರು ಮುತ್ತಿಗೆ ಹಾಕಲು ಯತ್ನಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಮಂಗಳೂರಿನ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಇರುವ ಬಿ.ಎಂ. ಭಾಷಾ ಮನೆಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಮುಖಂಡರ ಮುತ್ತಿಗೆ ಹಾಕಲು ಯತ್ನಿಸಿದ್ದು, ಈ ವೇಳೆ ಪೊಲೀಸರು ೧೪ ಮಂದಿ ಕಾರ್ಯತರ್ತರನ್ನು ಬಂಧಿಸಿದ್ದಾರೆ. ಇದಿನಬ್ಬ ಮಗ ಭಾಷಾ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿದ ಕಾರ್ಯಕರ್ತರು ಭಾಷಾರ ಸೊಸೆ ಜೊತೆ ಮಾತನಾಡಲು ಹೊರಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ದು, ಈ ವೇಳೆ ಮನೆಯ ಮುಂಭಾಗ ವಿಹೆಚ್ಪಿ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ತಳ್ಳಾಟ ನಡೆದಿದೆ. ಪ್ರತಿಭಟನೆ ನಡುವೆ ಮನೆಗೆ ನುಗ್ಗುವ ಪ್ರಯತ್ನ ಮಾಡಿದ ಕಾರ್ಯಕರ್ತರು, ಮಡಿಕೇರಿ ಮೂಲದ ಹಿಂದೂ ಯುವತಿಯನ್ನು ಲವ್ ಜಿಹಾದ್ ಮಾಡಿದ್ದಾರೆಂದು ಆರೋಪಿಸಿದರು. ಬಂಟ ಸಮುದಾಯದ ಯುವತಿಯನ್ನು ಇಸ್ಲಾಂಗೆ ಮತಾಂತರಿಸಿ ಭಯೋತ್ಪಾದನಾ ಚಟುವಟಿಕೆಗೆ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ. ಜನಜಾಗೃತಿಗಾಗಿ ಉಳ್ಳಾಲದ ರಸ್ತೆಗಳಲ್ಲಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಮಡಿಕೇರಿ ಮೂಲದ ಬಂಟ ಸಮುದಾಯದ ಯುವತಿ ಮರಿಯಮ್ ಆಲಿಯಾಸ್ ದೀಪ್ತಿ ಮಾರ್ಲ ಎಂಬಾಕೆಯನ್ನು ಲವ್ ಜಿಹಾದ್ ನಡೆಸಿ ಅನಾಸ್ನಿಂದ ದೀಪ್ತಿ ವಿವಾಹ ಮಾಡಲಾಗಿದೆ. ದೀಪ್ತಿ ಮಾರ್ಲ ಸೇರಿ ಇಡೀ ಕುಟುಂಬದ ವಿರುದ್ಧ ತನಿಖೆ ನಡೆಸಬೇಕು ಎಂದು ವಿಹೆಚ್ಪಿ ಆಗ್ರಹಿಸಿದೆ. ಅಮ್ಮರ್ ಅಬ್ದುಲ್ ರಹಮಾನ್ ಸೇರಿದಂತೆ ನಾಲ್ವರನ್ನು ಉಗ್ರರಿಗೆ ನೆರವು ನೀಡಿದ ಆರೋಪದ ಮೇರೆಗೆ ಬಂಧಿಸಲಾಗಿತ್ತು. ಐಸಿಸ್ ಸೇರಿದಂತೆ ಅನೇಕ ಉಗ್ರ ಸಂಘಟನೆಗಳ ನಂಟು ಹೊಂದಿರುವ ಅನುಮಾನದ ಮೇರೆಗೆ ಇವರನ್ನು ಸೆರೆ ಹಿಡಿಯಲಾಗಿದ್ದು, ಬಂಧಿತರಿAದ ಮೊಬೈಲ್, ಲ್ಯಾಪ್ಟಾಪ್ ಸೇರಿದಂತೆ ಅನೇಕ ಎಲೆಕ್ಟಾçನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವರೆಲ್ಲರೂ ಸಿರಿಯಾ ಮೂಲದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆಗೆ ಯುವಕರ ನೇಮಕಾತಿ ನಡೆಸುತ್ತಿದ್ದರು ಎನ್ನಲಾಗಿದೆ.
ಮಹಾರಾಷ್ಟç-ಕರ್ನಾಟಕ ಗಡಿ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಪತ್ರ
ಮುಂಬೈ, ಆ. ೧೧: ಮಹಾರಾಷ್ಟç ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ನೆರೆಯ ಕರ್ನಾಟಕದೊಂದಿಗೆ ರಾಜ್ಯದ ಗಡಿ ವಿವಾದವನ್ನು ಪರಿಹರಿಸಲು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿಗೆ ತಾ. ೯ ರಂದು ಬರೆದ ಪತ್ರದಲ್ಲಿ, ಮರಾಠಿ ಮಾತನಾಡುವ ಜನರ ಮೇಲೆ ಕರ್ನಾಟಕ ಸರ್ಕಾರದ ದೌರ್ಜನ್ಯವನ್ನು ನಿಲ್ಲಿಸಲು ಮತ್ತು ಮಹಾರಾಷ್ಟçದಲ್ಲಿ ವಿವಾದಿತ ಪ್ರದೇಶಗಳನ್ನು ಸೇರಿಸಲು ಮುಂದಾಗುವAತೆ ಮೋದಿಗೆ ಪವಾರ್ ಒತ್ತಾಯ ಮಾಡಿದ್ದಾರೆ. ಮಹಾರಾಷ್ಟç ರಾಜ್ಯ ರಚನೆಯಾಗಿ, ಮುಂಬೈ ರಾಜಧಾನಿಯಾಗಿ ೬೦ ವರ್ಷಗಳಿಗಿಂತ ಹೆಚ್ಚಾಗಿದೆ. ಆದರೆ, ಬೆಳಗಾವಿ, ಕಾರವಾರ, ಬೀದರ್, ಭಾಲ್ಕಿ, ನಿಪ್ಪಾಣಿ ಮತ್ತು ಕರ್ನಾಟಕದ ಇತರ ಮರಾಠಿ ಮಾತನಾಡುವ ಪ್ರದೇಶಗಳು ಇನ್ನೂ ಮಹಾರಾಷ್ಟçದಲ್ಲಿಲ್ಲ ಎಂದು ಪವಾರ್ ಹೇಳಿದ್ದಾರೆ. ಮಹಾರಾಷ್ಟçದ ಜನರು ಮತ್ತು ಮಹಾರಾಷ್ಟç ಗಡಿ ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳಲ್ಲಿ ವಾಸಿಸುವವರು ಸಮಸ್ಯೆಯನ್ನು ಇನ್ನೂ ಬಗೆಹರಿಸಿಲ್ಲ ಎಂದು ವಿಷಾಧಿಸುತ್ತಾರೆ ಎಂದು ಎನ್ಸಿಪಿ ನಾಯಕ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಕರ್ನಾಟಕದ ಕೆಲವು ಭಾಗಗಳಾದ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಕೆಲವು ಪ್ರದೇಶಗಳು ನಮ್ಮ ರಾಜ್ಯಕ್ಕೆ ಸೇರಿವೆ ಎಂದು ಮಹಾರಾಷ್ಟçವು ಹೇಳಿಕೊಳ್ಳುತ್ತಿದೆ. ಈ ಪ್ರದೇಶಗಳಲ್ಲಿನ ಹೆಚ್ಚಿನ ಜನಸಂಖ್ಯೆಯು ಮರಾಠಿ ಮಾತನಾಡುವವರಾಗಿದ್ದಾರೆ. ಬೆಳಗಾವಿ ಮತ್ತು ಇತರ ಗಡಿ ಪ್ರದೇಶಗಳ ಕುರಿತು ಉಭಯ ರಾಜ್ಯಗಳ ನಡುವಿನ ವಿವಾದವು ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ.