ನಾಪೋಕ್ಲು: ಬಲ್ಲಮಾವಟಿ ವ್ಯಾಪ್ತಿಯ ಕೂರುಳಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಶೀಲಾ ಕೆ.ಎಂ. ಹಾಗೂ ಎಮ್ಮೆಮಾಡು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾವೇರಮ್ಮ ಸಿ.ಎನ್. ಇವರುಗಳು ನಿವೃತ್ತಿ ಹೊಂದಿದ ಹಿನ್ನೆಲೆ ನಾಪೋಕ್ಲು ಅಂಗನವಾಡಿ ಕೇಂದ್ರದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ಈ ಸಂದರ್ಭ ಅಂಗನವಾಡಿ ಕಾರ್ಯಕರ್ತರಾದ ಲೀಲಾವತಿ, ಕೃತಿಕಾ, ಪವಿತ್ರ, ಭಾಗ್ಯವತಿ, ಜ್ಯೋತಿ ಮತ್ತಿತರರು ಇದ್ದರು.ವೀರಾಜಪೇಟೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿದ್ದ ಪೆರಿಗ್ರಿನ್ ಎಸ್. ಮಚ್ಚಾಡೋ, ಮಾಲ್ದಾರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಜೆ. ಶಿವರಾಮ್, ಗೋಣಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ಸಿ.ಎನ್. ಶಾಂತಿ ಅವರುಗಳು ಸೇವೆಯಿಂದ ನಿವೃತ್ತಿಗೊಂಡ ಹಿನ್ನೆಲೆ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದಿAದ ಪಟ್ಟಣದ ಜಯಪ್ರಕಾಶ್ ನಾರಾಯಣ ಸ್ಮಾರಕ ಶಾಲೆಯಲ್ಲಿ ಸನ್ಮಾನಿಸಲಾಯಿತು.
ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಲಾಲ್ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಸಂಪನ್ಮೂಲ ಸಂಯೋಜನ ಅಧಿಕಾರಿ ವನಜಾಕ್ಷಿ, ಶಿಕ್ಷಣ ಸಂಯೋಜಕ ಅಯ್ಯಪ್ಪ, ದೈಹಿಕ ಪರಿವೀಕ್ಷಕಿ ಗಾಯತ್ರಿ ಹಾಗೂ ಇತರರು ಇದ್ದರು.ಪೊನ್ನಂಪೇಟೆ: ಕಳೆದ ೮ ವರ್ಷದಿಂದ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯಪೇದೆ ಸಾದಲಿ ನಾಪೋಕ್ಲು ಪೊಲೀಸ್ ಠಾಣೆಗೆ ಹಾಗೂ ಸಿಬ್ಬಂದಿ ಸುಬ್ರಮಣಿ ವೀರಾಜಪೇಟೆ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದು, ಇವರಿಗೆ ಪೊನ್ನಂಪೇಟೆ ಪೊಲೀಸ್ ಠಾಣೆ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಈ ಸಂದರ್ಭ ವೀರಾಜಪೇಟೆ ತಾಲೂಕು ಡಿವೈಎಸ್ಪಿ ಜಯಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್, ಗೋಣಿಕೊಪ್ಪ ಠಾಣಾಧಿಕಾರಿ ಸುಬ್ಬಯ್ಯ ಹಾಜರಿದ್ದರು.ಮಡಿಕೇರಿ: ರೋಟರಿ ಸಂಸ್ಥೆ ವತಿಯಿಂದ ಮಡಿಕೇರಿಯ ಅಂಚೆ ನೌಕರರನ್ನು ಸನ್ಮಾನಿಸಲಾಯಿತು.
ನಗರದ ರೋಟರಿ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅಂಚೆ ಕಚೇರಿಯ ಹೆಡ್ಪೋಸ್ಟ್ಮ್ಯಾನ್ ಬೇಬಿ ಜೋಸೆಫ್ ಹಾಗೂ ಪೋಸ್ಟ್ವುಮೆನ್ ಪಿ.ವಿ. ವೀಣಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇವರಿಬ್ಬರು ಕೋವಿಡ್ ಸಂದಿಗ್ಧ ಪರಿಸ್ಥಿತಿ ಮತ್ತು ಅತಿಮಳೆಯ ಸಂದರ್ಭವೂ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿದ್ದ ಹಿನ್ನೆಲೆ ರೋಟರಿ ಸಂಸ್ಥೆ ಸನ್ಮಾನಿಸಿ ಗೌರವಿಸಿತು.
ಮಡಿಕೇರಿ ಮುಖ್ಯ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಟಿ.ಪಿ. ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶನಿವಾರಸಂತೆ: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ೧೩ ಸಿಬ್ಬಂದಿಗಳು ವರ್ಗಾವಣೆಗೊಂಡ ಹಿನ್ನೆಲೆ ಗುಡುಗಳಲೆ ಆರ್.ವಿ ಕಲ್ಯಾಣ ಮಂಟಪದಲ್ಲಿ ಸರಳ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.
ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್ ಶ್ರೀಮಂಗಲ ಠಾಣೆಗೆ ಸಿಬ್ಬಂದಿಗಳಾದ ಚೆನ್ನಕೇಶವ, ಸಂತೋಷ್ ಕುಮಾರ್ ಕುಶಾಲನಗರ ಟ್ರಾಫಿಕ್ ವಿಭಾಗಕ್ಕೆ, ಮಂಜುನಾಥ ಮಡಿಕೇರಿ ಸಂಚಾರಿ ವಿಭಾಗಕ್ಕೆ, ರಾಧ ಸಿದ್ದಾಪುರ, ಶಶಿ, ಪ್ರವೀಣ್ ಕುಮಾರ್ ಕುಶಾಲನಗರ ಗ್ರಾಮಾಂತರ ಠಾಣೆಗೆ, ವಿವೇಕ್ ಮಡಿಕೇರಿ, ರಘು ಶ್ರೀಮಂಗಲ, ಉಷಾ ಗೋಣಿಕೊಪ್ಪ, ಸವಿತಾ ಮಡಿಕೇರಿ, ಕುಮಾರಸ್ವಾಮಿ ಮಡಿಕೇರಿ ನಗರ ಠಾಣೆಗೆ, ಶಫೀರ್ ಭಾಗಮಂಡಲ ಠಾಣೆಗೆ ವರ್ಗಾವಣೆಗೊಂಡಿದ್ದು, ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಸಮಾರಂಭದಲ್ಲಿ ಡಿವೈಎಸ್ಪಿ ಶೈಲೇಂದ್ರ, ಸೋಮವಾರಪೇಟೆ ವೃತ್ತ ನಿರೀಕ್ಷಕ ಮಹೇಶ್, ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಪರಮಶಿವಮೂರ್ತಿ, ಶನಿವಾರಸಂತೆ ಠಾಣಾಧಿಕಾರಿ ದೇವರಾಜ್, ಸುಂಟಿಕೊಪ್ಪ ಠಾಣಾಧಿಕಾರಿಗಳಾದ ಪುನೀತ್ ಕುಮಾರ್, ವೆಂಕಟರಮಣ, ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.