ಮಡಿಕೇರಿ, ಆ.೧೧; ಕೊಡಗು ಜಿಲ್ಲಾ ಜನತಾದಳ (ಜಾತ್ಯತೀತ)ದ ಅಧ್ಯಕ್ಷರಾಗಿ ಎರಡನೇ ಬಾರಿಗೆ ನೇಮಕಗೊಂಡಿರುವ ಕೆ.ಎಂ. ಗಣೇಶ್ ಅವರನ್ನು ಪಕ್ಷದ ಅಡಾಕ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ಈ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಮುಂದಕ್ಕೆ ಪಕ್ಷಕ್ಕೆ ಸೇರ್ಪಡೆಗೊಳ್ಳುವವರು ತಾಲೂಕು, ಹೋಬಳಿ ಸಮಿತಿಯ ಮೂಲಕ ಅಡಾಕ್ ಸಮಿತಿಯ ಅನುಮತಿಯೊಂದಿಗೆ ಸೇರ್ಪಡೆಗೊಳ್ಳಬೇಕಿದೆ, ಮಾರ್ಪಾಡುಗಳು ಹಾಗೂ ಗೊಂದಲಗಳನ್ನು ಬಗೆಹರಿಸುವ ಜವಾಬ್ದಾರಿ ಅಡಾಕ್ ಸಮಿತಿಗೆ ಇರುವದಾಗಿ ಅಧ್ಯಕ್ಷ ಗಣೇಶ್ ತಿಳಿಸಿದ್ದಾರೆ. ಪಕ್ಷ ಸಂಘಟನೆಗೊಳ್ಳುತ್ತಿದ್ದು, ಯಾವದೇ ಭಿನ್ನಾಭಿಪ್ರಾಯಗಳಿದ್ದರೂ ಸಮಿತಿಯಲ್ಲಿ ಬಗೆಹರಿಸಿಕೊಳ್ಳಲಾಗು ವದೆಂದು ತಿಳಿಸಿದ್ದಾರೆ.