ಸಿದ್ದಾಪುರ, ಆ. ೧೦: ಸಿದ್ದಾಪುರದ ಉದ್ಯಮಿ ರಾಜೇಂದ್ರ ಸಿಂಗ್ ಅವರು ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮಾಲ್ದಾರೆಯ ಗದ್ದಿಗೆಬೆಟ್ಟ ಸುತ್ತಮುತ್ತಲಿನ ಅರಣ್ಯದೊಳಗೆ ನೂರಾರು ಹಣ್ಣಿನ ಮರಗಳ ಗಿಡಗಳನ್ನು ನೆಟ್ಟರು. ಅಲ್ಲದೆ ಹಣ್ಣಿನ ಮರಗಳ ಬೀಜಗಳನ್ನು ಬಿತ್ತನೆ ಮಾಡಿದರು.