ಮಡಿಕೇರಿ, ಆ. ೯: ಅರೇಬಿಕಾ ತಳಿಯ ಕಾಫಿಗೆ ಸಾರ್ವಕಾಲಿಕ ಬೆಲೆ ಬಂದಿರುವAತೆಯೇ ಈ ದರ ಇನ್ನು ಮುಂದಿನ ಎರಡರಿಂದ ಮೂರು ವರ್ಷ ಮುಂದುವರಿಯಲಿದೆ ಎಂದು ಅಂತಾರಾಷ್ಟಿçÃಯ ಕಾಫಿ ಸಂಸ್ಥೆ ಐಸಿಓ ತಿಳಿಸಿದೆ. ವಿಶ್ವದ ಅತ್ಯಂತ ದೊಡ್ಡ ಅರೇಬಿಕಾ ಕಾಫಿ ಬೆಳೆಯುವ ದೇಶವಾದ ಬ್ರೆಜಿಲ್ನಲ್ಲಿ ಹಿಂದೆAದೂ ಕಂಡು ಬಾರದ ಹಿಮಪಾತ ಆಗಿದ್ದು ಈಗಾಗಲೇ ಶೇಕಡ ೧೨ ರಷ್ಟು ತೋಟ ನಾಶವಾಗಿದೆ.
ಮೂಲಗಳ ಪ್ರಕಾರ ಎರಡು ಲಕ್ಷ ಹೆಕ್ಟೇರ್ ಗಳಷ್ಟು ತೋಟ ನಾಶವಾಗಿದ್ದು ಮೊದಲಿನಂತೆ ಬೆಳೆ ಬರಬೇಕಾದರೆ ಕನಿಷ್ಟ ಮೂರು ವರ್ಷ ಸಮಯ ತಗುಲಲಿದೆ. ಕಾಫಿಯ ಜಾಗತಿಕ ದೃಷ್ಟಿ ಕೋನದ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಐಸಿಓ ಕಾರ್ಯನಿರ್ವಾಹಕ ನಿರ್ದೇಶಕ ಜೋಸ್ ಸೆಟ್ಟೆ ಅವರು ಇತ್ತೀಚಿನ
(ಮೊದಲ ಪುಟದಿಂದ) ಅರೇಬಿಕಾ ಕಾಫಿ ದರಕ್ಕೆ ಹೋಲಿಸಿದರೆ ಮುಂದಿನ ದರಗಳು ಮುಗಿಲು ಮುಟ್ಟಿ ಹೊಸ ದಾಖಲೆ ಸೃಷ್ಟಿಸಲಿವೆ. ಆದರೆ ಬೆಳೆಗಾರರು ದರ ಏರಿಕೆಯ ಆಮಿಷಕ್ಕೀಡಾಗದೆ ಯಾವುದೇ ಕಾರಣಕ್ಕೂ ಕಾಫಿ ಬೆಳೆಯುವ ಪ್ರದೇಶವನ್ನು ವಿಸ್ತರಿಸಬಾರದೆಂದು ಅವರು ಎಚ್ಚರಿಕೆ ನೀಡಿದರು. ಈಗ ಇರುವ ತೋಟಗಳಲ್ಲೇ ಗರಿಷ್ಠ ಬೆಳೆ ಬೆಳೆಯಲು ಪ್ರಯತ್ನಿಸಬೇಕು ಎಂದು ಕರೆ ನೀಡಿದ ಅವರು ಗುಣಮಟ್ಟದ ಕಾಫಿ ಉತ್ಪಾದನೆಗೆ ಆದ್ಯತೆ ನೀಡಿ ಎಂದರು.
ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬ್ರೆಜಿಲಿಯನ್ ಸ್ಪೆಷಾಲಿಟಿ ಕಾಫಿ ಅಸೋಸಿಯೇಶನ್ನ ವನುಸಿಯಾ ನೊಗುಯೆರಾ ಅವರು ಬ್ರೆಜಿಲ್ ನಲ್ಲಿ ೨೦೨೦ ರಲ್ಲಿ ಬರಗಾಲ ಮತ್ತು ೨೦೨೧ ರ ಮಧ್ಯ ಭಾಗದಲ್ಲಿ ತೀವ್ರ ಹಿಮಪಾತದಿಂದಾಗಿ ಕಾಫಿ ಬೆಳೆ ನಷ್ಟವಾಗಿದೆ ಎಂದರು. ಇಡೀ ಜಗತ್ತನ್ನೇ ಬಾಧಿಸುತ್ತಿರುವ ಕೋವಿಡ್ ಸಾಂಕ್ರಮಿಕವೂ ಕಾಫಿ ಉದ್ಯಮದ ಮೇಲೆ ಪ್ರಭಾವ ಬೀರಿದ್ದು ಸರಬರಾಜು ಮತ್ತು ಬಳಕೆದಾರರ ಮೇಲೂ ಪರಿಣಾಮ ಬೀರಿದೆ ಎಂದರು. ಕಾಫಿಯ ಉತ್ಪಾದಕರು ಮತ್ತು ರಫ್ತುದಾರರು ಕಂಟೈನರ್ ಗಳ ಕೊರತೆಯನ್ನು ಎದುರಿಸುತ್ತಿದ್ದು ಇದು ಕಾಫಿ ಸರಬರಾಜು ಸರಪಳಿಯ ಮೇಲೆ ಪ್ರಭಾವ ಬೀರಿದೆ ಎಂದರು.
ಜಾಗತಿಕವಾಗಿ ಕಾಫಿಯ ಬಳಕೆಯು ಈಗ ವಾರ್ಷಿಕವಾಗಿ ಶೇ. ೨ ರಿಂದ ೨.೨೫ ರಷ್ಟು ಏರಿಕೆ ದಾಖಲಿಸುತಿದ್ದು ಆನ್ ಲೈನ್ ಮಾರಾಟದಲ್ಲಿ ಹೆಚ್ಚಳ ದಾಖಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಬಳಕೆದಾರರು ಕಡಿಮೆ ದರ್ಜೆಯ ಕಾಫಿ ಖರೀದಿಗೆ ಹೆಚ್ಚಿನ ಒಲವು ತೋರುತಿದ್ದಾರೆ.
ಅಂತರಾಷ್ಟಿçÃಯ ಕಾಫಿ ಸಂಸ್ಥೆಯು ೨೦೨೧-೨೨ ನೇ ಸಾಲಿಗೆ ಜಾಗತಿಕ ಕಾಫಿ ಉತ್ಪಾದನೆಯ ಅಂದಾಜನ್ನು ಒಟ್ಟು ೧೬೯.೬ ಮಿಲಿಯನ್ ಚೀಲಗಳೆಂದು (೬೦ ಕೆಜಿ ಚೀಲ) ಅಂದಾಜಿಸಿದ್ದು ಬ್ರೆಜಿಲ್ ನ ಹಿಮಪಾತದ ಕಾರಣದಿಂದ ಇದರಲ್ಲಿ ಶೇ. ೨ ರಷ್ಟು ಕುಸಿತ ಆಗಲಿದೆ ಎಂದು ಅಂದಾಜನ್ನು ಪರಿಷ್ಕರಿಸಿದೆ. ೨೦೧೦-೨೧ ನೇ ಸಾಲಿನಲ್ಲಿ ವಿಶ್ವದ ಕಾಫಿ ಬಳಕೆ ೧೬೪.೨ ಮಿಲಿಯನ್ ಚೀಲಗಳೆಂದು ಅಂದಾಜಿಸಲಾಗಿತ್ತಾದರೂ ಅದು ಶೇ. ೧.೩ ರಷ್ಟು ಏರಿಕೆ ದಾಖಲಿಸಿದೆ. ೨೦೧೯-೨೦ ರಲ್ಲಿ ಅಂರ್ರಾಷ್ಟಿçÃಯ ಒಟ್ಟು ಬಳಕೆ ೧೬೪.೨ ಮಿಲಿಯನ್ ಚೀಲಗಳಷ್ಟು ದಾಖಲಾಗಿತ್ತು.
ಈ ಎಲ್ಲಾ ಅಂದಾಜಿನ ಪ್ರಕಾರ ಅರೇಬಿಕಾ ಬೆಳೆಗಾರರಿಗೆ ಮುಂದಿನ ಮೂರು ವರ್ಷಗಳ ಕಾಲ ಬಂಪರ್ ದರ ಸಿಗುವುದಾದರೂ ಈ ದರ ಮುಂದುವರಿಯುವುದಿಲ್ಲ ಎಂಬುದು ಕಟು ವಾಸ್ತವವಾಗಿದೆ