ನಾಪೋಕ್ಲು, ಆ. ೮: ದೇಶದ ಪುರುಷರ ಹಾಕಿ ತಂಡವು ೪೧ ವರ್ಷಗಳ ಬಳಿಕ ೨೦೨೧ ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಹಿನ್ನೆಲೆಯಲ್ಲಿ ನಾಪೋಕ್ಲುವಿನ ಶಿವಾಜಿ ಯೂತ್ ಕ್ಲಬ್ನ ಸದಸ್ಯರು ಶುಕ್ರವಾರ ನಗರದಲ್ಲಿ ಪಟಾಕಿ ಸಿಡಿಸಿ ಜಯ ಘೋಷದೊಂದಿಗೆ ಗೆಲುವನ್ನು ಸಂಭ್ರಮಿಸಿದರು.
ಈ ಸಂದರ್ಭ ಕ್ಲಬ್ ಅಧ್ಯಕ್ಷ ಕಲೇಟಿರ ದೀಪು ದೇವಯ್ಯ, ಕಾರ್ಯದರ್ಶಿ ಬೊಟ್ಟೋಳಂಡ ಚೇತನ್, ಮುರುಳಿ ಕರುಂಬಮ್ಮಯ್ಯ, ಮನು ಮಹೇಶ್, ಕುಶು ಕುಶಾಲಪ್ಪ, ಸತೀಶ್ ದೇವಯ್ಯ, ಸಚಿನ್, ರತ್ನ ಪೆಮ್ಮಯ್ಯ, ಸದ ವಿನೋದ್, ಜಯ, ಜಗದೀಶ್, ಮತ್ತಿತರರು ಇದ್ದರು.