ಕೂಡಿಗೆ, ಆ. ೮: ಸರಕಾರದ ಅದೇಶದಂತೆ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಶಿರಂಗಾಲ ಚೆಕ್‌ಪೋಸ್ಟ್ಗೆ ಅಧಿಕಾರಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಹಾಸನ ಹೆದ್ದಾರಿಯ ಮೂಲಕ ಕೊಡಗಿನ ಗಡಿಭಾಗ ಶಿರಂಗಾಲದ ಮುಖೇನ ಜಿಲ್ಲೆಗೆ ಪ್ರವೇಶಿಸುವ ಎಲ್ಲಾ ಪ್ರಯಾಣಿಕರ ತಪಾಸಣೆ ಮತ್ತು ಅವರ ದಾಖಲೆಗಳ ಪರಿಶೀಲನೆ ಕಟ್ಟುನಿಟ್ಟಾಗಿ ನಡೆಯುತ್ತಿದ್ದು, ಜಿಲ್ಲೆಗೆ ಪ್ರವೇಶಿಸುವ ಕೇರಳ ಮತ್ತು ಮಹಾರಾಷ್ಟç ರಾಜ್ಯದ ಎಲ್ಲಾ ಪ್ರಯಾಣಿಕರ ವಾಹನಗಳ ತಪಾಸಣೆ ಮತ್ತು ಆರೋಗ್ಯ ಇಲಾಖೆಯ ನೆಗೆಟಿವ್ ಪತ್ರಗಳ ಪರಿಶೀಲನೆ ನಂತರ ಜಿಲ್ಲೆಗೆ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಶಿರಂಗಾಲ ಚೆಕ್‌ಪೋಸ್ಟ್ಗೆ ಕುಶಾಲನಗರ ಡಿವೈಎಸ್‌ಪಿ ಶೈಲೇಂದ್ರ, ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್, ಭೇಟಿ ವೇಳೆ ಉಪ ತಹಶೀಲ್ದಾರ್ ಮಧುಕುಮಾರ್, ಕಂದಾಯ ಪರಿವೀಕ್ಷಕ ಸಂತೋಷ್ ಕುಮಾರ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.