ಕುಶಾಲನಗರ, ಆ. ೮: ಶಾಸಕ ಅಪ್ಪಚ್ಚು ರಂಜನ್ ಅವರು ಭಾನುವಾರ ಕುಶಾಲನಗರ ಗಡಿಭಾಗದ ಕೋವಿಡ್ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಬರುವ ಅಂತರರಾಜ್ಯ ವಾಹನಗಳ ಮಾಹಿತಿ ಪಡೆದ ರಂಜನ್, ಕಟ್ಟುನಿಟ್ಟಾಗಿ ವಾಹನಗಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ಸೂಚನೆ ನೀಡಿದರು.

ಎರಡು ದಿನಗಳ ಅವಧಿಯಲ್ಲಿ ಸಮರ್ಪಕವಾದ ದಾಖಲೆಗಳನ್ನು ಹೊಂದದ ೫೦ ಕ್ಕೂ ಅಧಿಕ ವಾಹನಗಳನ್ನು ಜಿಲ್ಲೆಯ ಪ್ರವೇಶಕ್ಕೆ ಅವಕಾಶ ನೀಡದೆ ವಾಪಾಸು ಕಳುಹಿಸಿರುವುದಾಗಿ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.

ಕುಶಾಲನಗರ ಗಡಿಭಾಗದ ಕೇಂದ್ರದಲ್ಲಿ ಪೊಲೀಸ್, ಆರೋಗ್ಯ, ಕಂದಾಯ ಶಿಕ್ಷಣ, ಅರಣ್ಯ ಇಲಾಖೆಯ ೨೦ ಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿಗಳು ದಿನದ ೨೪ ಗಂಟೆಗಳ ಕಾಲ ಕರ್ತವ್ಯದಲ್ಲಿ ತೊಡಗಿದ್ದಾರೆ.