ಪೊನ್ನAಪೇಟೆ, ಆ. ೮: ಇತ್ತೀಚೆಗೆ ಮತ್ತೂರು ಗ್ರಾಮದ ಕಾಕೇರ ಪೂವಯ್ಯ ಎಂಬವರ ಮನೆಯ ಬೀಗ ಮುರಿದು ೨೫ ಸಾವಿರ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ಪಣಿಯರವರ ಸುಬ್ರಮಣಿ ಅಲಿಯಾಸ್ ಚುಬ್ರು (೨೮) ಎಂಬಾತನೇ ಬಂಧಿತ ಆರೋಪಿ.

ಬಂಧನಕ್ಕೆ ಸಹಕರಿಸಿದ ಆಟೋ ಚಾಲಕರು

ಬೆಳಿಗ್ಗೆ ಪೊನ್ನಂಪೇಟೆಯ ಮದ್ಯದಂಗಡಿಯೊAದರ ಸಮೀಪ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಸಂದರ್ಭ ಆತನನ್ನು ಗಮನಿಸಿದ ಪೊನ್ನಂಪೇಟೆ ನಂದೀಶ್ವರ

ಆಟೋ ಚಾಲಕರ ಸಂಘದ ಸಹ ಕಾರ್ಯದರ್ಶಿ ಚೀರಂಡ ಪ್ರವೀಣ್ ಚಂಗಪ್ಪ, ಆಟೋ ಚಾಲಕರಾದ ಗಣೇಶ, ಸಿದ್ದಿಕ್ ಮತ್ತೂರು ಗ್ರಾಮದ ಬೋಪಣ್ಣ ಹಾಗೂ ರವಿ ಇವರುಗಳು ಬೆನ್ನಟ್ಟಿ ಹಿಡಿದು ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸಿಬ್ಬಂದಿಯೊAದಿಗೆ ಸ್ಥಳಕ್ಕೆ ಬಂದ ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ ಆತನನ್ನು ಬಂಧಿಸಿ ಠಾಣೆಗೆ ಕರೆಸಿ ಕೂಲಂಕುಶವಾಗಿ ವಿಚಾರಣೆ ನಡೆಸಿದಾಗ ಆತ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಪೊಲೀಸರು ರೂ.೩೭೫೦ ನಗದು ಹಾಗೂ ಆತನ ಬಳಿ ಇದ್ದ ಒಂದು ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ಯ ನಂತರ ಆರೋಪಿಯನ್ನು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು ತಾ.೨೧ ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಭಯ ಹುಟ್ಟಿಸಿದ್ದ ಆರೋಪಿ

ಕತ್ತಿಯನ್ನು ಹಿಡಿದುಕೊಂಡು ಮತ್ತೂರು ಗ್ರಾಮದ ಸುತ್ತಮುತ್ತ ಓಡಾಡುತ್ತಿದ್ದ

(ಮೊದಲ ಪುಟದಿಂದ) ಚುಬ್ರು ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡು ಗ್ರಾಮಸ್ಥರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಕೈಗೆ ಸಿಗದೇ ಓಡಾಡುತ್ತಿದ್ದ. ಈತನ ಕೈಯಲ್ಲಿ ಯಾವಾಗಲು ಕತ್ತಿ ಇರುತ್ತಿದ್ದರಿಂದ ಗ್ರಾಮಸ್ಥರು ಭಯಗೊಂಡಿದ್ದರು. ವೃದ್ದೆಯೊಬ್ಬರನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಈತನ ಉಪಟಳದಿಂದ ಗ್ರಾಮಸ್ಥರು ಬೇಸತ್ತಿದ್ದರು. ಕಾಕೇರ ಪೂವಯ್ಯ ಅವರ ಮನೆಯಲ್ಲಿ ಕಳ್ಳತನವಾದ ನಂತರ ಪೊನ್ನಂಪೇಟೆ ರೈತ ಸಂಘದ ಸಂಚಾಲಕ ಸಿ. ಮನು ಅವರ ನೇತೃತ್ವದಲ್ಲಿ ಮತ್ತೂರಿನ ಯುವಕರ ತಂಡ ಕಳೆದ ನಾಲ್ಕೆöÊದು ದಿನಗಳಿಂದ ಚುಬ್ರುವಿನ ಪತ್ತೆಗಾಗಿ ಮತ್ತೂರು ಸುತ್ತಮುತ್ತ ಹುಡುಕಾಟ ನಡೆಸುತ್ತಿದ್ದರು. ಇದೀಗ ಚುಬ್ರುವಿನ ಬಂಧನವಾಗಿರುವುದರಿAದ ಗ್ರಾಮಸ್ಥರು ಈಗ ನಿಟ್ಟುಸಿರುಬಿಟ್ಟಿದ್ದಾರೆ.

ಕಳ್ಳತನವನ್ನೇ ಕಾಯಕ ಮಾಡಿಕೊಂಡಿರುವುದರಿAದ ಆತ ಜೈಲಿನಿಂದ ಬಿಡುಗಡೆಯಾದ ನಂತರ ಮತ್ತೆ ಅದೇ ಕಾಯಕ ಮುಂದುವರೆಸುವ ಸಾಧ್ಯತೆ ಇರುವುದರಿಂದ ಆತನಿಗೆ ಸೂಕ್ತ ಶಿಕ್ಷೆ ಕೊಡಿಸಬೇಕೆಂದು ಕಿರುಗೂರು ಗ್ರಾ.ಪಂ. ಸದಸ್ಯರಾದ ಕಾಕೇರ ರವಿ ಹಾಗೂ ರಾಕೇಶ್ ಪೂವಯ್ಯ ಹಾಗೂ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೀರಾಜಪೇಟೆ ತಾಲೂಕು ಡಿ ವೈ ಎಸ್ ಪಿ ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್, ಸಿಬ್ಬಂದಿ ಮನು, ಸತೀಶ್, ಮಹದೇಶ್ವರ ಸ್ವಾಮಿ, ಮಹೇಶ್, ಬಸವರಾಜ್ ಕೌಜಲಗಿ, ಮಂಜುನಾಥ್ ಹಾಗೂ ಉಷಾ ಭಾಗವಹಿಸಿದ್ದರು. -ಚನ್ನನಾಯಕ