ಚೆಟ್ಟಳ್ಳಿ, ಆ. ೮: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇ-ಕೆ.ವೈ.ಸಿ ಜಾರಿಗೊಳಿಸುವ ಮೂಲಕ ಪ್ರತಿಯೊಬ್ಬ ಪಡಿತರ ಕಾರ್ಡುದಾರರು ತಾ. ೧೦ ರೊಳಗೆ ಬೆರಳಚ್ಚು ನೀಡುವ ಗಡುವಿನ ಕ್ರಮ ಸರಿಯಲ್ಲವೆಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜನಪರ ಹೋರಾಟ ಸಮಿತಿಯ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದ್ದಾರೆ.

ಕೊರೊನಾ ಹಾಗೂ ಮಳೆಗಾಲದ ಪರಿಸ್ಥಿತಿಯಲ್ಲಿ ಪಡಿತರ ಚೀಟಿದಾರರು ಒಟ್ಟಾಗಿ ಬಂದು ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ನೀಡುವುದು ಕಷ್ಟಸಾಧ್ಯ. ಇ.ಕೆ.ವೈ.ಸಿ. ಪ್ರಕ್ರಿಯೆಗೆ ಮುಂದಿನ ಒಂದೆರಡು ತಿಂಗಳವರೆಗೆ ಗಡುವನ್ನು ವಿಸ್ತರಿಸಬೇಕೆಂದು ಆಗ್ರಹಿಸಿದ್ದಾರೆ.