ಮಡಿಕೇರಿ, ಆ. ೮: ಮಡಿಕೇರಿ ನಿವಾಸಿ ಪಿ.ಎಂ. ಕುಮಾರನ್ ಅವರ ಪುತ್ರಿ ಪಿ.ಕೆ. ದಿವ್ಯಾ ಅವರು ಜಿಲ್ಲಾ ಮಹಿಳಾ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಹಿನ್ನೆಲೆ ಹಿಂದೂ ಮಲೆಯಾಳಿ ಸಂಘದಿAದ ದಿವ್ಯಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮಂಗಳೂರು ರಸ್ತೆಯಲ್ಲಿರುವ ದಿವ್ಯಾ ಅವರ ಮನೆಯಲ್ಲಿ ಕೋವಿಡ್ ಹಿನ್ನೆಲೆ ಸರಳ ಸಮಾರಂಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್, ದಿವ್ಯಾ ಅವರ ಸಾಧನೆ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದರು.

ಸAಘದ ಗೌರವ ಸಲಹೆಗಾರ ಸುಧೀರ್, ವಾಸುದೇವ್, ಖಜಾಂಚಿ ಪಿ.ಟಿ. ಉತ್ತಮ, ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ಜಂಟಿ ಕಾರ್ಯದರ್ಶಿ ದಿನೇಶ್ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.