ಸಂಪಾಜೆ, ಆ. ೮: "ಸ್ವಚ್ಛ ಭಾರತ್ ಪಾಕ್ಷಿಕ ಅಭಿಯಾನ" ಯೋಜನೆ ಅಂಗವಾಗಿ ನೆಹರು ಯುವ ಕೇಂದ್ರ, ಮಡಿಕೇರಿ ಇವರ ಆಶ್ರಯದಲ್ಲಿ ಶ್ರೀ ಭಗವಾನ್ ಸಂಘ ಊರುಬೈಲುವಿನ ಸದಸ್ಯರು ತಾ.೧ರಂದು ಚೆಂಬು ಗ್ರಾಮದ ಎಲ್ಲಾ ಪ್ರಮುಖ ಸೇತುವೆಗಳನ್ನು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರಾರಂಭದಲ್ಲಿ ಸಂಘದ ಕಾರ್ಯದರ್ಶಿ ಯತೀಶ್ ಹನಿಯಡ್ಕ ಸಂಘದ ಸದಸ್ಯರಿಗೆ ಮತ್ತು ಗ್ರಾಮಸ್ಥರಿಗೆ ಸ್ವಚ್ಛತಾ ಪ್ರತಿಜ್ಞಾವಿಧಿ ಭೋದಿಸಿದರು. ಬಳಿಕ ಗ್ರಾಮದ ಬಾಲಂಬಿ, ಕೂಡಡ್ಕ, ಕೆಲ್ಸಿಕಾನ, ದೇವಾಲಯ ಮತ್ತು ಏಣಿಯಾರು ಸೇತುವೆಗಳನ್ನು ಶುಚಿಗೊಳಿಸಲಾಯಿತು.
ಅಭಿಯಾನದ ನೇತೃತ್ವವನ್ನು ಪಯಸ್ವಿನಿ ಸೊಸೈಟಿ ಅಧÀ್ಯಕ್ಷ ಯನ್.ಸಿ ಅನಂತ್ ಊರುಬೈಲು ಸಂಘದ ಅಧÀ್ಯಕ್ಷ ದಿನೇಶ್ ಸಣ್ಣಮನೆ ವಹಿಸಿದ್ದರು. ಶ್ರಮದಾನದ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಸುಬ್ರಮಣ್ಯ ಉಪಾಧ್ಯಾಯ ಆದಂ ಸೆಂಟ್ಯಾರ್, ಪ್ರಸನ್ನ ಕಾಚೇಲು ಮುಂತಾದವರು ಹಾಜರಿದ್ದರು.