ಕುಶಾಲನಗರ, ಆ ೮: ಕುಶಾಲನಗರ ಕಾವೇರಿ ಸೇತುವೆ ಕೆಳಭಾಗದಲ್ಲಿ ನದಿಗೆ ಅಡ್ಡಲಾಗಿ ಸಿಲುಕಿ ಕೊಂಡಿರುವ ಬೃಹತ್ ಗಾತ್ರದ ಬೀಟೆಮರವೊಂದು ನೀರಿನ ಹರಿವಿಗೆ ಅಡ್ಡಿಮಾಡುತ್ತಿದೆ.
ಕಳೆದ ಒಂದು ವರ್ಷದ ಹಿಂದೆ ಪ್ರವಾಹ ಸಂದರ್ಭದಲ್ಲಿ ಈ ಮರ ಸೇತುವೆ ನಡುವೆ ಸಿಲುಕಿದ್ದು, ಈ ಬಗ್ಗೆ ಸ್ಥಳೀಯ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಇನ್ನೂ ತೆರವು ಗೊಂಡಿಲ್ಲ. ‘ಶಕ್ತಿ’ಯಲ್ಲಿ ಈ ಬಗ್ಗೆ ವರದಿ ಕೂಡಾ ಪ್ರಕಟಗೊಂಡಿತ್ತ್ತು.
ಭಾನುವಾರ ಶಾಸಕ ರಂಜನ್ ಅವರು ನದಿ ಪ್ರವಾಹ ಬಗ್ಗೆ ಮಾಹಿತಿ ಪಡೆಯಲು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಈ ಬಗ್ಗೆ ಗಮನಕ್ಕೆ ಬಂದು ತಕ್ಷಣ ತೆರವುಗೊಳಿಸಲು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
-ಸಿಂಚು.