ಶನಿವಾರಸಂತೆ, ಆ. ೮: ಸೆಸ್ಕ್ ಶನಿವಾರಸಂತೆ ಶಾಖಾ ವ್ಯಾಪ್ತಿಯಲ್ಲಿ ವಿಶೇಷ ಕೃಷಿ ಪಂಪ್‌ಸೆಟ್ ಕಂದಾಯ ವಸೂಲಾತಿಯನ್ನು ಹಮ್ಮಿಕೊಂಡಿದ್ದು, ಎಲ್ಲಾ ಬೆಳೆಗಾರರು ಕಂದಾಯ ಪಾವತಿಸುವ ಮೂಲಕ ಸೆಸ್ಕ್ ವಿತರಣಾ ಕಂಪನಿಯ ಆರ್ಥಿಕ ಮಟ್ಟವನ್ನು ಹೆಚ್ಚಿಸಬೇಕು ಎಂದು ಸೆಸ್ಕ್ ಶಾಖಾಧಿಕಾರಿ ಕಿರಿಯ ಇಂಜಿನಿಯರ್ ಹೇಮಂತ್ ಮನವಿ ಮಾಡಿದ್ದಾರೆ.

ಶನಿವಾರಸಂತೆ ಕಂದಾಯ ಶಾಖೆಗೆ ಒಳಪಟ್ಟಂತೆ ಶನಿವಾರಸಂತೆ, ಕೊಡ್ಲಿಪೇಟೆ ಮತ್ತು ಆಲೂರು ಸಿದ್ದಾಪುರ ಶಾಖಾ ವ್ಯಾಪ್ತಿಯಲ್ಲಿ ಕೃಷಿ ಪಂಪ್‌ಸೆಟ್‌ಗೆ ಸಂಬAಧಿಸಿದAತೆ ರೂ. ೩ ಕೋಟಿಗೂ ಅಧಿಕ ಕಂದಾಯ ಬಾಕಿ ಇರುತ್ತದೆ. ಪ್ರಸ್ತುತ ವಿದ್ಯಮಾನದಲ್ಲಿ ವಿತರಣಾ ಕಂಪನಿಗಳನ್ನು ಕೇಂದ್ರ ಸರಕಾರ ಖಾಸಗೀಕರಣಗೊಳಿಸಲು ಮುಂದಾಗಿದ್ದು, ಇದರಿಂದ ನೌಕರರು ಮಾನಸಿಕ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮಳೆ - ಗಾಳಿ ಲೆಕ್ಕಿಸದೆ ಹಗಲಿರುಳು ದೈಹಿಕ ಒತ್ತಡದಲ್ಲೂ ಗ್ರಾಹಕರ ಸೇವೆಯಲ್ಲಿ ಕುಂದುಕೊರತೆ ಬಾರದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಂಪನಿಯ ಆರ್ಥಿಕ ಮಟ್ಟದ ಸುಧಾರಣೆಗಾಗಿ ಎಲ್ಲಾ ನೌಕರರು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಶನಿವಾರಸಂತೆ ಕಂದಾಯ ಶಾಖೆಗೆ ಒಳಪಡುವ ಎಲ್ಲಾ ರೈತರು, ಬೆಳೆಗಾರರು, ಗ್ರಾಹಕರು ಕಂದಾಯ ಪಾವತಿಸುವ ಮೂಲಕ ಸಹಕಾರ ನೀಡಬೇಕು ಎಂದು ಸೆಸ್ಕ್ ಅಧಿಕಾರಿ ಹೇಮಂತ್ ಕೋರಿದ್ದಾರೆ.