ಮಡಿಕೇರಿ, ಆ. ೭: ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಹಮ್ಮಿಯಾಲ ಸಂಪರ್ಕ ರಸ್ತೆಯಲ್ಲಿರುವ ಸೇತುವೆ ಅಪಾಯಕಾರಿಯಾಗಿದೆ. ಈ ಹಿಂದಿನ ವರ್ಷಗಳ ಮಳೆಗಾಲದ ಸಂದರ್ಭವೇ ಸೇತುವೆ ಹಾನಿಗೀಡಾಗಿದೆ. ಸೇತುವೆ ಸಂಪರ್ಕದ ಎರಡು ಬದಿಯಲ್ಲಿ ರಸ್ತೆ ಕುಸಿಯುವ ಅಪಾಯ ಎದುರಾಗಿದೆ.
ಇದು ತಗ್ಗುಪ್ರದೇಶದಲ್ಲಿರುವ ಸೇತುವೆಯಾಗಿದ್ದು, ಈಗಿನ ಮಳೆಗೆ ತೋಡು ತುಂಬಿ ಹರಿಯುತ್ತಿದೆ. ನೀರಿನಲ್ಲಿ ಕೊಚ್ಚಿ ಬರುವ ಮರಗಳು ಸೇತುವೆಗೆ ತಾಗಿ ನಿಂತಿದ್ದು ಕಂಡುಬAದಿದೆ. ಇದು ಹಟ್ಟಿಹೊಳೆ ರಸ್ತೆಯನ್ನು ಸಂಪರ್ಕಿಸುವ ಸೇತುವೆಯೂ ಆಗಿದ್ದು, ಇದನ್ನು ತ್ವರಿತವಾಗಿ ಸರಿಪಡಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.