ಮಡಿಕೇರಿ, ಆ. ೫: ರಾಜ್ಯದಲ್ಲಿ ಕೋವಿಡ್ -೧೯ ಸಾಂಕ್ರಾಮಿಕ ರೋಗದ ೨ನೇ ಅಲೆಯ ಕಾರಣದಿಂದ ಹಾಗೂ ೩ನೇ ಅಲೆ ವ್ಯಾಪಿಸುವ ಸಾಧ್ಯತೆ ಇರುವ ಬಗ್ಗೆ ತಜ್ಞರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ೨೦೨೦-೨೧ನೇ ಸಾಲಿನಲ್ಲಿ ಅನುಮತಿ ನೀಡಿರುವಂತೆ, ಪ್ರಸಕ್ತ ಸಾಲಿನಲ್ಲಿಯೂ ಸಹಕಾರ ಸಂಘಗಳ / ಸೌಹಾರ್ದ ಸಹಕಾರಿಗಳ ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸುವ ಅವಧಿಯನ್ನು ೨೫ ಸೆಪ್ಟೆಂಬರ್‌ನಿAದ ೨೫ ಡಿಸೆಂಬರ್ ೨೦೨೧ರವರೆಗೆ ವಿಸ್ತರಿಸಲು ಹಾಗೂ ಈ ಸಭೆಗಳನ್ನು ಗಿiಜeo ಅoಟಿಜಿeಡಿeಟಿಛಿe / ಗಿiಡಿಣuಚಿಟ ಒeeಣiಟಿg ಮೂಲಕವೂ ನಡೆಸಲು ಅನುಮತಿ ನೀಡುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿ, ಆದೇಶ ಹೊರಡಿಸಿದೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ರ ಪ್ರಕರಣ ೧೨೧ರಡಿ ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ ೧೯೯ರ ಪ್ರಕರಣ ೭೦ರಡಿ ಸರ್ಕಾರಕ್ಕೆ ಪ್ರದತ್ತ ವಾದ ಅಧಿಕಾರವನ್ನು ಚಲಾಯಿಸಿ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕ್ರಮವಾಗಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ರ ಪ್ರಕರಣ ೨೭(೧)ರಲ್ಲಿ ಸಹಕಾರ ಸಂಘಗಳ ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ ೧೯೯೭ರ ಪ್ರಕರಣ ೨೭(ಹೆಚ್-೩), ೩೦(೧) ಹಾಗೂ ೬೦(೧)ಗಳಲ್ಲಿ ಸೌಹಾರ್ದ ಸಹಕಾರಿಗಳ ವಾರ್ಷಿಕ ಸಾಮಾನ್ಯ ಸಭೆಯನ್ನು ಸೆಪ್ಟೆಂಬರ್ ತಿಂಗಳ ಇಪ್ಪತ್ತೆöÊದನೇ ದಿನದೊಳಗೆ ನಡೆಸತಕ್ಕದ್ದು ಎಂಬ ಅವಕಾಶವನ್ನು ಸಡಿಲಿಸಲಾಗಿದೆ. ಡಿಸೆಂಬರ್ ತಿಂಗಳ ಇಪ್ಪತ್ತೆöÊದನೇ ದಿನದೊಳಗೆ ನಡೆಸಲು ಹಾಗೂ ಕೋವಿಡ್ -೧೯ ನಿಯಮಾವಳಿಗಳನ್ನು ಅನುಸರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸಲು ಎಲ್ಲಿ ಅವಕಾಶ ವಿರುವುದೋ ಅಂತಹ ಸಹಕಾರ ಸಂಸ್ಥೆಗಳು ಭೌತಿಕ ಹಾಜರಾತಿ ಯೊಂದಿಗೆ ಮತ್ತು ಒಂದು ವೇಳೆ ಆ ರೀತಿ ಅವಕಾಶವಿಲ್ಲದಿದ್ದ ಪಕ್ಷದಲ್ಲಿ ಅಂತಹ ಸಹಕಾರ ಸಂಘಗಳು / ಸೌಹಾರ್ದ ಸಹಕಾರಿಗಳು ಗಿiಜeo ಅoಟಿಜಿeಡಿeಟಿಛಿe / ಗಿiಡಿಣuಚಿಟ ಒeeಣiಟಿg ವಿಧಾನವನ್ನು ಅನುಸರಿಸಿ ೨೦೨೧-೨೨ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಈ ಕೆಳಕಂಡ ನಿಬಂಧನೆಗೊಳಪಟ್ಟು ನಡೆಸಲು ಅನುಮತಿ ನೀಡಿ ಆದೇಶಿಸಿದೆ.

ಸರ್ವ ಸದಸ್ಯರ ಸಭೆಯನ್ನು ಗಿiಜeo ಅoಟಿಜಿeಡಿeಟಿಛಿe / ಗಿiಡಿಣuಚಿಟ ಒeeಣiಟಿg ಮೂಲಕವೂ ನಡೆಸಬಹುದು, ಸರ್ವ ಸದಸ್ಯರ ಸಭೆ ನಡೆಯುವ ದಿನಾಂಕ ಮತ್ತು ವೇಳೆಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸುವುದು, ಸಭೆಯ ನೋಟೀಸು ಹಾಗೂ ಇನ್ನಿತರ ದಾಖಲಾತಿಗಳನ್ನು ಸಂಘದ ವೆಬ್‌ಸೈಟ್ ಮೂಲಕ ಪ್ರಚುರಗೊಳಿಸುವುದು ಹಾಗೂ ಹಾಲಿ ಅನುಸರಿಸುತ್ತಿರುವ ಪದ್ಧತಿಯಂತೆ ನೋಟೀಸುಗಳನ್ನು ಅಂಚೆಯ ಮೂಲಕ ರವಾನಿಸಲು ಸಹ ಕ್ರಮವಿಡ ತಕ್ಕದ್ದು. ಸದಸ್ಯರಿಗೆ ಡಿವಿಡೆಂಡ್‌ಗಳನ್ನು ಇಸಿಎಸ್ ಮೂಲಕ ಅವರುಗಳ ಖಾತೆಗೆ ಪಾವತಿಸಲು ಕ್ರಮವಿಡುವುದು. ಇಂತಹ ಸಭೆಯ ನಡವಳಿಗಳನ್ನು ಅಧಿಕೃತವಾಗಿ ರೆಕಾರ್ಡ್ ಮಾಡಿ ದಾಖಲಿಸುವ ತಂತ್ರಜ್ಞಾನ ಅಳವಡಿಸಿ ಕೊಳ್ಳತಕ್ಕದ್ದು. ಸರ್ವ ಸದಸ್ಯರ ಸಭೆ ನಡೆಸುವ ಸ್ಥಳದಲ್ಲಿ ಕೋವಿಡ್ -೧೯ರ ನಿಯಮಾವಳಿಗಳಿಗೆ ಒಳಪಟ್ಟು ಹಾಜರಾತಿಯನ್ನು ನಿರ್ವಹಿಸಿ ಸಹಕಾರ ಸಂಘಗಳ/ ಸೌಹಾರ್ದ ಸಹಕಾರಿಗಳ ಅಧಿನಿಯಮಗಳನ್ವಯ ನಮೂದಿಸಿರುವ ಅಂಶಗಳನ್ನು ಕಾರ್ಯ ಸೂಚಿಯಲ್ಲಿ ಅಳವಡಿಸಿ ಕೊಂಡು ಹಾಲಿ ಪದ್ಧತಿಯಂತೆ ನಡವಳಿಗಳನ್ನು ನಡೆಸಲು ಕಳುಹಿಸತಕ್ಕದ್ದು. ಸಭೆ ನಡೆಸಲು ಕಾಲಕಾಲಕ್ಕೆ ಸರ್ಕಾರವು ಹೊರಡಿಸುವ ಕೋವಿಡ್ ಮಾರ್ಗ ಸೂಚಿಗಳನ್ನು ಮತ್ತು ಆದೇಶಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.