ಮಡಿಕೇರಿ/ಸಿದ್ದಾಪುರ ಆ. ೬: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಹುಸಿಯಾದ ಬೆನ್ನಲ್ಲೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇಂದು ಮಡಿಕೇರಿಗೆ ನೂತನ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಆಗಮಿಸಿದ್ದ ಸಂದರ್ಭ ಅವರನ್ನು ಸ್ವಾಗತಿಸಲು ತೆರಳದೆ, ಸಭೆಗೂ ಹಾಜರಾಗದೆ ತಮ್ಮ ಆಕ್ರೋಶವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂತು. ಇದರ ನಡುವೆ ನೇರವಾಗಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೂಡ ಮಾತನಾಡಿದ್ದಾರೆ.
ಮೊದಲು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಶಾಸಕ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಇಬ್ಬರು ಗೈರಾಗಿದ್ದರು. ಬಳಿಕ ಜಿ.ಪಂ. ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಗೆ ಬೋಪಯ್ಯ ಹಾಜರಾದರು. ರಂಜನ್ ಮಾತ್ರ ಬರಲಿಲ್ಲ. ಇದು ಕಾರ್ಯಕರ್ತರ ನಡುವೆ ಬಿಸಿ ಚರ್ಚೆಗೆ ಕಾರಣವಾಯಿತು.
ಯಾರೇ ಸಚಿವರು ಆಗಮಿಸಿದರೂ ಅವರಿಗೆ ಹೂಗುಚ್ಛ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂತು. ಇದರ ನಡುವೆ ನೇರವಾಗಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೂಡ ಮಾತನಾಡಿದ್ದಾರೆ.
ಮೊದಲು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಶಾಸಕ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಇಬ್ಬರು ಗೈರಾಗಿದ್ದರು. ಬಳಿಕ ಜಿ.ಪಂ. ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಗೆ ಬೋಪಯ್ಯ ಹಾಜರಾದರು. ರಂಜನ್ ಮಾತ್ರ ಬರಲಿಲ್ಲ. ಇದು ಕಾರ್ಯಕರ್ತರ ನಡುವೆ ಬಿಸಿ ಚರ್ಚೆಗೆ ಕಾರಣವಾಯಿತು.
ಯಾರೇ ಸಚಿವರು ಆಗಮಿಸಿದರೂ ಅವರಿಗೆ ಹೂಗುಚ್ಛ (ಮೊದಲ ಪುಟದಿಂದ) ಮುಂದಿನ ದಿನಗಳಲ್ಲಿ ಸ್ಥಾನ ಸಿಗಬಹುದೇ.? ಕಾದು ನೋಡೋಣ ಎಂದು ಹೇಳಿದರು.
ಸಂಸದÀ ವಿರುದ್ಧ ಅಸಮಾಧಾನ
ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಕಿಟ್ ವಿತರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಂಜನ್, ಸಾಮಾಜಿಕ ನ್ಯಾಯದಡಿಯಲ್ಲಿ ಸಚಿವ ಸ್ಥಾನ ದೊರಕುತ್ತೆ ಎಂಬ ನಿರೀಕ್ಷೆಯಲ್ಲಿದ್ದೆ. ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಮೂರಕ್ಕಿಂತ ಅಧಿಕ ಸಚಿವ ಸ್ಥಾನಗಳನ್ನು ನೀಡಿದ್ದು, ಕೊಡಗು ಜಿಲ್ಲೆಯನ್ನು ಈ ಬಾರಿ ಕೂಡ ಸಂಪುಟದಿAದ ಕೈ ಬಿಟ್ಟಿರುವುದು ಬೇಸರ ಸಂಗತಿ. ಕೊಡಗು ಜಿಲ್ಲೆಯ ಹಿರಿಯ ಶಾಸಕರಿಬ್ಬರನ್ನು ಈ ಬಾರಿ ಕೂಡ ಕಡೆಗಣಿಸಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಕೊಡಗಿಗೆ ಸಚಿವ ಸ್ಥಾನ ದೊರಕಿಸಿಕೊಡುವಲ್ಲಿ ರಾಜ್ಯ ಉಪಾಧ್ಯಕ್ಷರಾಗಿರುವ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಸಚಿವ ಸ್ಥಾನದ ಬಗ್ಗೆ ಒತ್ತಡ ಹಾಕದೆ ಜಾಣ ಮೌನ ವಹಿಸಿರುವುದು ಬೇಸರ ತಂದಿದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಂಬತ್ತು ಸಾವಿರ ಮತಗಳ ಅಂತರ ಕಾಯ್ದುಕೊಳ್ಳಲು ಜಿಲ್ಲೆಯ ಶಾಸಕರಿಬ್ಬರು ಶ್ರಮವಹಿಸಿದ್ದೇವೆ ಎಂದರು.