ಪೊನ್ನಂಪೇಟೆ.ಆ.೫ : ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಿರಿಜಾ ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಬೊಟ್ಟಂಗಡ ದಶಮಿ ಅವರು ಆಯ್ಕೆಯಾದರು. ಪೊನ್ನಂಪೇಟೆ ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಯೋಗಾನಂದ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.
ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ೨೦ ಸ್ಥಾನಗಳ ಪೈಕಿ ಚುನಾವಣೆಯಲ್ಲಿ ಬಿಜೆಪಿ ೧೦ ಸ್ಥಾನ, ಕಾಂಗ್ರೆಸ್ ೯ ಸ್ಥಾನ ಪಡೆದುಕೊಂಡಿತ್ತು. ೧ ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿತ್ತು. ಗ್ರಾಮ ಪಂಚಾಯಿತಿಯ ಚುಕ್ಕಾಣಿ ಹಿಡಿಯಲು ಎರಡು ಪಕ್ಷದ ಬೆಂಬಲಿತರು ಸ್ಪರ್ಧೆಗಿಳಿದಿದ್ದರು.