ನಾಪೋಕ್ಲು, ಆ. ೫: ಇಲ್ಲಿನ ಬ್ರೀಟಿಷರ ಕಾಲದ ನಾಪೋಕ್ಲು ನಾಡ ಕಚೇರಿ ಕಟ್ಟಡವನ್ನು ೧೪ಲಕ್ಷರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿದ್ದು ನವೀಕರಣಗೊಂಡ ನಾಡಕಚೇರಿಯನ್ನು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು. ಬಳಿಕ ಕಂದಾಯ ಇಲಾಖೆ ಸಿಬ್ಬಂದಿಗಳೊAದಿಗೆ ಸಮಾಲೊಚನೆ ನಡೆಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಾಪೋಕ್ಲು ದೊಡ್ಡ ಪಟ್ಟಣವಾಗಿದ್ದು ಕಸವಿಲೆವಾರಿಗೆ ಸೂಕ್ತ ಸ್ಥಳಾವಕಾಶ ಇಲ್ಲದೇ ಇರುವುದರಿಂದ ಸಮಸ್ಯೆಯಾಗುತ್ತಿದೆ. ಕಸವಿಲೇವಾರಿಗೆ ಎರಡು ಎಕರೆ ಜಾಗವನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭ ಗ್ರಾಮಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಸದಸ್ಯರಾದ ಕುಲ್ಲೆಟಿರ ಅರುಣ್ಬೇಬ, ಕುಶುಕುಶಾಲಪ್ಪ, ನೀಲಮ್ಮ, ಪಿಡಿಒ ಚೋಂದಕ್ಕಿ ಇದ್ದರು. ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಮನವಿ: ಚೆರಿಯಪರಂಬು ನಿವಾಸಿ ಶರೀಪ ಚೆರಿಯಪರಂಬುವಿನ ಕಾವೇರಿ ನದಿ ದಡದಲ್ಲಿ ನಿರ್ಮಿಸಲಾಗಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಎಲ್ಲವನ್ನೂ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.