ಕೂಡಿಗೆ, ಆ. ೫: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯದ ಕ್ರೀಡಾ ಹಾಸ್ಟೆಲ್ ಮತ್ತು ಕ್ರೀಡಾ ಶಾಲೆಗಳಿಗೆ ವಿದ್ಯಾರ್ಥಿಗಳ ವಿಶೇಷ ಆಯ್ಕೆ ಶಿಬಿರ ಕೂಡಿಗೆ ಕ್ರೀಡಾ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿದೆ.
ಈಗಾಗಲೇ ನಡೆದ ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತು ಬೇರೆ ಬೇರೆ ಕಾರಣದಿಂದಾಗಿ ದೂರದ ಊರುಗಳಿಂದ ಬರಲು ಸಾಧ್ಯವಾಗದೆ ಉಳಿದ ವಿದ್ಯಾರ್ಥಿಗಳಿಗೆ, ಕ್ರೀಡಾ ಅರ್ಹತೆಯ ಮೇಲೆ ಮತ್ತು ಜಿಲ್ಲಾ ಮತ್ತು ವಿಭಾಗದ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಯಾ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತು ಬೇರೆ ಬೇರೆ ಕಾರಣದಿಂದಾಗಿ ದೂರದ ಊರುಗಳಿಂದ ಬರಲು ಸಾಧ್ಯವಾಗದೆ ಉಳಿದ ವಿದ್ಯಾರ್ಥಿಗಳಿಗೆ, ಕ್ರೀಡಾ ಅರ್ಹತೆಯ ಮೇಲೆ ಮತ್ತು ಜಿಲ್ಲಾ ಮತ್ತು ವಿಭಾಗದ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಯಾ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ ಎಂದು ರಾಜ್ಯಮಟ್ಟದ ಶಿಬಿರಾಧಿಕಾರಿ ಡಾ. ವಸಂತ್ ಕುಮಾರ್ ತಿಳಿಸಿದ್ದಾರೆ. ೪೪ ಕ್ರೀಡಾ ತರಬೇತಿದಾರರು ಪಾಲ್ಗೊಂಡಿದ್ದಾರೆ.
ಶಿಬಿರದಲ್ಲಿ ವಾಲಿಬಾಲ್, ಅಥೆೆ್ಲಟಿಕ್ಸ್, ಬಾಸ್ಕೆಟ್ ಬಾಲ್, ಫುಟ್ಬಾಲ್, ಜಿಮ್ನಾಸ್ಟಿಕ್ ಸೇರಿದಂತೆ ಎಂಟು ಕ್ರೀಡೆಗಳ ಸಂಬAಧ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತವೆ ಎಂದು ಕೂಡಿಗೆ ಕ್ರೀಡಾ ಶಾಲೆ ಮುಖ್ಯೋಪಾಧ್ಯಾಯ ಧನುಕುಮಾರ್ ತಿಳಿಸಿದ್ದಾರೆ.