ಮಡಿಕೇರಿ, ಆ. ೫: ಕಟ್ಟಡ ನವೀಕರಣ ಸಂಬAಧ ಅನುಮತಿಗೆ ನಗರಸಭೆ ಸದಸ್ಯ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದಾದರೆ ಆರೋಪ ಸಾಬೀತುಪಡಿಸಲಿ. ಅದನ್ನು ಹೊರತು ಪಡಿಸಿ ಸದಸ್ಯರ ಮನೋಸ್ಥೆöÊರ್ಯ ಕುಗ್ಗಿಸುವ ಕೆಲಸ ಮಾಡಬಾರದು ಎಂದು ಬಿ.ಜಿ.ಪಿ. ಮಹಿಳಾ ಮೋರ್ಚಾ ತಿಳಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯೆ ಅನಿತಾ ಪೂವಯ್ಯ, ಮೂಡ ಅಧ್ಯಕ್ಷರು ಹಾಗೂ ನಗರಸಭೆ ಸದಸ್ಯರು ಕಟ್ಟಡ ಪರಿಶೀಲನೆಗೆ ತೆರಳಿದ ಸಂದರ್ಭ ಗುತ್ತಿಗೆದಾರ ಅಗೌರವ ತೋರಿದ್ದಾರೆ. ಈ ಸಂದರ್ಭ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಮಾತನಾಡಿರುವ ವೀಡಿಯೋ ಕೂಡ ವೈರಲ್ ಆಗಿದ್ದು, ಇದರಿಂದ ಸಾರ್ವಜನಿಕ ವಲಯದಲ್ಲಿ ಸದಸ್ಯರುಗಳ ಮೇಲೆ ತಪ್ಪು ಅಭಿಪ್ರಾಯ ಮೂಡಿದೆ. ಸರಿಯಾದ ಸಾಕ್ಷಾö್ಯಧಾರಗಳಿದ್ದಲ್ಲಿ ಕಾನೂನು ರೀತಿಯ ಕ್ರಮಕೈಗೊಳ್ಳಲಿ ಎಂದು ಸವಾಲೆಸೆದರು.
ಗೋಷ್ಠಿಯಲ್ಲಿ ಮೋರ್ಚಾದ ನಗರಾಧ್ಯಕ್ಷೆ ಸವಿತಾ ರಾಕೇಶ್, ನಗರ ಉಪಾಧ್ಯಕ್ಷೆ ಸಿ.ಕೆ. ಮಂಜುಳಾ, ಪ್ರಧಾನ ಕಾರ್ಯದರ್ಶಿ ಶ್ವೇತಾ ಪ್ರಶಾಂತ್, ಜಿಲ್ಲಾ ಸದಸ್ಯರಾದ ಶಾರದ ನಾಗರಾಜ್, ಬಿ.ಪಿ. ಚಿತ್ರಾವತಿ ಇದ್ದರು.