ಮುಳ್ಳೂರು, ಆ. ೬: ಕೊಡ್ಲಿಪೇಟೆ ಗ್ರಾ.ಪಂ. ಮಾಸಿಕ ಸಭೆಯನ್ನು ವಾರದಲ್ಲಿ ೨ ದಿನ ಕರೆಯಲಾಗಿದ್ದರೂ ಗ್ರಾ.ಪಂ.ಅಧಿಕಾರಿಗಳ ಹೊಂದಾಣಿಕೆಯ ಕೊರತೆಯಿಂದ ಸದಸ್ಯರು ಸಭೆಯನ್ನು ಬಹಿಷ್ಕಾರ ಮಾಡಿದ್ದರೆ, ಮತ್ತೊಮ್ಮೆ ಕರೆದ ಸಭೆಯಲ್ಲಿ ಕೋರಂ ಇಲ್ಲದ ಕಾರಣದಿಂದ ಸಭೆಯನ್ನು ಮುಂದೂಡಲಾಗಿದೆ. ಕೊಡ್ಲಿಪೇಟೆ ಗ್ರಾ.ಪಂ. ಮಾಸಿಕ ಸಾಮಾನ್ಯ ಸಭೆಯನ್ನು ಅಧ್ಯಕ್ಷ ಕೆ.ಆರ್.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಜು. ೩೧ ರಂದು ಕರೆಯಲಾಗಿತ್ತು. ಸದಸ್ಯರು ಸಭೆಯನ್ನು ಬಹಿಷ್ಕರಿಸಿದ್ದರಿಂದ ಸಭೆಯನ್ನು ತಾ.೩ಕ್ಕೆ ಮುಂದೂಡಲಾಗಿತ್ತು. ಆದರೆ ಸಭೆಯಲ್ಲಿ ಬಹಳಷ್ಟು ಸದಸ್ಯರು ಗೈರು ಹಾಜರಾಗಿದ್ದು ಕೋರಂ ಇಲ್ಲದ ಕಾರಣ ಮತ್ತೆ ಸಭೆಯನ್ನು ಮುಂದೂಡಲಾಗಿದೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸೇರಿದಂತೆ ೧೫ ಮಂದಿ ಸದಸ್ಯರನ್ನೊಳಗೊಂಡಿರುವ ಕೊಡ್ಲಿಪೇಟೆ ಗ್ರಾ.ಪಂ. ಸಾಮಾನ್ಯ ಸಭೆಯನ್ನು ಕಳೆದ ೭ ತಿಂಗಳಲ್ಲಿ ಕೇವಲ ೨ ಬಾರಿ ಮಾತ್ರ ಕರೆಯಲಾಗಿತ್ತು. ಗ್ರಾ.ಪಂ. ಅಧಿಕಾರಿಗಳ ನಡೆಗೆ ಬಹಳಷ್ಟು ಸದಸ್ಯರು ಅಸಮಾಧಾನಗೊಂಡಿದ್ದರು. ಲೆಕ್ಕಾಧಿಕಾರಿ ಹರಿಣಿ ಅವರು ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಇತರ ಸದಸ್ಯರೊಂದಿಗೆ ಹಾಗೂ ಗ್ರಾ.ಪಂ. ನೀರುಗಂಟಿಯರೊAದಿಗೆ ಬೇಜಾವ್ಬಾರಿಯಿಂದ ವರ್ತಿಸುತ್ತಿರುವುದು ಮತ್ತು ಗ್ರಾ.ಪಂ.ಗೆ ಸೇರಿದ ಕುಡಿಯುವ ನೀರಿನ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿದ್ದ ನೀರುಗಂಟಿಗಳಿಗೆ ಲೆಕ್ಕಾಧಿಕಾರಿ ಹಣ ನೀಡದೆ ಬಾಕಿ ಉಳಿಸಿಕೊಂಡಿರುವ ಕುರಿತು ಮಾಸಿಕ ಸಭೆಯಲ್ಲಿ ಹಾಜರಾಗಿ ಲೆಕ್ಕಾಧಿಕಾರಿ ಸಭೆಯಲ್ಲಿ ಸಮಜಾಯಿಷಿಕೆ ನೀಡುವಂತೆ ಮಾಸಿಕ ಸಭೆಯ ಮೊದಲೇ ಲೆಕ್ಕಾಧಿಕಾರಿಗೆ ಸೂಚಿಸಲಾಗಿತ್ತು. ಜು.೩೧ರಂದು ಕರೆದ ಮಾಸಿಕ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರುಗಳು ಹಾಜರಾಗಿದ್ದರೂ ಲೆಕ್ಕಾಧಿಕಾರಿ ಗೈರು ಹಾಜರಾಗಿದ್ದರು. ಇದರಿಂದ ಕುಪಿತಗೊಂಡ ಉಪಾಧ್ಯಕ್ಷೆ ಗೀತ ತ್ಯಾಗರಾಜ್, ಡಿ.ಕೆ.ಪ್ರಸನ್ನ ಅವರುಗಳು ಈ ಮಾಸಿಕ ಸಭೆಯಲ್ಲಿ ಮುಖ್ಯವಾಗಿ ಲೆಕ್ಕಾಧಿಕಾರಿ ಹಾಜರಾಗಿ ಸಭೆಯಲ್ಲಿ ಸಮಜಾಯಿಷಿಕೆ ನೀಡಬೇಕಿತ್ತು. ಈಗ ಅವರು ಗೈರು ಹಾಜರಾಗಿರುವುದರಿಂದ ಸಭೆ ನಡೆಸುವುದರಲ್ಲಿ ಅರ್ಥ ಇಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಮತ್ತೊಬ್ಬ ಸದಸ್ಯ ಶೋಭಿತ್ ಗೌಡ ಅವರು ಗ್ರಾ.ಪಂ.ಯ ಮಾಸಿಕ ಸಭೆಯಲ್ಲಿ ಕುಂದು ಕೊರತೆ, ಗ್ರಾ.ಪಂ.ಯಿAದ ಆಗಬೇಕಿರುವ ಕಾಮಗಾರಿಗಳು, ಅರ್ಜಿದಾರರ ಕಡತ ವಿಲೇವಾರಿ ಮುಂತಾದ ಪ್ರಕ್ರಿಯೆ ಮತ್ತು ಪ್ರಗತಿ ಕಾರ್ಯಗಳ ಬಗ್ಗೆ ಚರ್ಚೆಯಾಗಬೇಕು. ಆದರೆ ನಮ್ಮ ಗ್ರಾ.ಪಂ.ಯ ಮಾಸಿಕ ಸಭೆಯಲ್ಲಿ ಪ್ರಗತಿಗೆ ಸಂಬAಧಪಟ್ಟ ಚರ್ಚೆಗಳಾಗುತ್ತಿಲ್ಲ. ಅಧಿಕಾರಿಗಳ ಅಸಹಕಾರ ಧೋರಣೆ ಮತ್ತು ಪ್ರತಿ ಮಾಸಿಕ ಸಭೆಗಳಲ್ಲಿ ಸದಸ್ಯರು ಹಾಗೂ ಅಧಿಕಾರಿಗಳ ಹೊಂದಾಣಿಕೆಯ ಕೊರತೆಯಿಂದ ನಮ್ಮ ಗ್ರಾ.ಪಂ. ಅಭಿವೃದ್ಧಿಯಾಗುತ್ತಿಲ್ಲ. ಯಾವುದೇ ಕೆಲಸ ಕಾರ್ಯಗಳಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಇದಕ್ಕೆ ಗ್ರಾ.ಪಂ. ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದ್ದರು. ಈ ಸಂದರ್ಭ ಗ್ರಾ.ಪಂ. ಪಿಡಿಒ ಹರೀಶ್ ಸಮಜಾಯಿಷಿಕೆ ನೀಡದ ಹಿನ್ನೆಲೆ ಸಭೆಯನ್ನು ಬಹಿಷ್ಕರಿಸಲಾಗಿತ್ತು. ತಾ.೩ ರಂದು ನಡೆದ ಮಾಸಿಕ ಸಭೆಯಲ್ಲಿ ಬಹಳಷ್ಟು ಸದಸ್ಯರು ಸೇರಿದಂತೆ ಗ್ರಾ.ಪಂ. ಪಿಡಿಒ ಸಹ ಗೈರು ಹಾಜರಾಗಿದ್ದರು. ಕೋರಂ ಇಲ್ಲದ ಕಾರಣ ಅಧ್ಯಕ್ಷರು ಮಾಸಿಕ ಸಭೆಯನ್ನು ಮುಂದೂಡಿದ್ದಾರೆ.

-ಭಾಸ್ಕರ್ ಮುಳ್ಳೂರು