ಸಿದ್ದಾಪುರ, ಆ. ೫: ಸಂಧಿ, ಕೀಲು ನೋವು ಇದ್ದ ರೋಗಿಯ ಕಿಡ್ನಿ ವೈಫಲ್ಯವಾಗಿದೆ ಎಂಬ ಆಸ್ಪತ್ರೆಯ ವರದಿಯ ಎಡವಟ್ಟಿನಿಂದ ಇಡೀ ಕುಟುಂಬ ಮೂರು ದಿನ ಆತಂಕಕ್ಕೆ ಒಳಗಾದ ಘಟನೆ ನಡೆದಿದೆ.
ಹಾಕತ್ತೂರಿನ ಅಬ್ದುಲ್ಲಾ ಎಂಬವರು ಸಂಧಿ, ಕೀಲು ನೋವಿನಿಂದಾಗಿ ತಾ. ೨ ರಂದು ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ (ಪ್ರಸ್ತುತ ಸರಕಾರಿ ಆಸ್ಪತ್ರೆ) ಚಿಕಿತ್ಸೆಗೆ ತೆರಳಿದ್ದರು. ಇವರಿಗೆ ಚಿಕಿತ್ಸೆ ನೀಡಿದ ವೈದ್ಯರು ಕೆಲವು ಮಾತ್ರೆಗಳನ್ನು ನೀಡಿ, ರಕ್ತ ಪರೀಕ್ಷೆಗೆ ಸೂಚಿಸಿದರು. ರೋಗಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಪ್ರಯೋಗಾಲಯದ ವರದಿ ಕೈ ಸೇರುವಾಗ ಸಂಜೆ ಆಗಿತ್ತು. ಸಂಜೆ ಕರ್ತವ್ಯದಲ್ಲಿದ್ದ ವೈದ್ಯರು ವರದಿಯನ್ನು ನೋಡಿ ‘ಕಿಡ್ನಿ ವೈಫಲ್ಯ’ ಎಂದಿದ್ದಾರೆ. ಅಲ್ಲದೆ ನಾಳೆ ದಿನ ವೈದ್ಯರನ್ನು ಭೇಟಿ ಮಾಡುವಂತೆ ತಿಳಿಸಿದರು. ಇದರಿಂದ ಆಘಾತವಾದ ಸಂಬAಧಿಕರು ವರದಿಯ ಬಗ್ಗೆ ತಮ್ಮ ಪರಿಚಯದ ವೈದ್ಯರ ಬಳಿ ಮಾಹಿತಿ ಬಯಸಿದಾಗ ‘ಈ ವರದಿಯ ಪ್ರಕಾರ ತುಂಬಾ ಸಮಸ್ಯೆ ಇದೆ. ಕೂಡಲೇ ಡಯಾಲಿಸಿಸ್ ಮಾಡಬೇಕಾಗುತ್ತದೆ’ ಎಂದು ಮಾಹಿತಿ ನೀಡಿದರು. ಇದರಿಂದಾಗಿ ಇಡೀ ಕುಟುಂಬದಲ್ಲಿ ಆತಂಕ ಸೃಷ್ಟಿಯಾಯಿತು.
ಮುಂದೇನು ಎಂದು ತಾ. ೩ ರಂದು ಮತ್ತೆ ಅಶ್ವಿನಿ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡಿದ ಸಂದರ್ಭ ಮತ್ತೊಬ್ಬ ವೈದ್ಯರ ಬಳಿ ತೆರಳುವಂತೆ ಸೂಚಿಸಿದರು. ಅಲ್ಲಿದ್ದ ವೈದ್ಯರು ಕೆಲವು ಮಾತ್ರೆಗಳನ್ನು ಬರೆದು ಕೊಟ್ಟು, ಬರುವ ಸೋಮವಾರ (ಅಂದರೆ ೬ ದಿನ ಬಿಟ್ಟು) ಬರುವಂತೆ ಸೂಚಿಸಿದರು.
ಕಿಡ್ನಿ ಸಮಸ್ಯೆ ಇರುವುದರಿಂದ ಮಂಗಳೂರಿನ ಯಾವುದಾದರೂ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ರೋಗಿಯ ಕುಟುಂಬದವರು ಚರ್ಚೆ ಮಾಡಿ, ಆಸ್ಪತ್ರೆಗಳ ಬಗ್ಗೆ ಮಾಹಿತಿ ಪಡೆದರು. ತಂದೆಯ ಆರೋಗ್ಯದ ಬಗ್ಗೆ ವಿದೇಶದಲ್ಲಿರುವ ರೋಗಿಯ ಮಗ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು.
ಬೇರೆ ಯಾವುದೇ ರೋಗ ಲಕ್ಷಣ ಇಲ್ಲದ ವ್ಯಕ್ತಿಯ ಕಿಡ್ನಿ ವೈಫಲ್ಯ ಎಂಬದು ನಂಬಲು ಸಾಧ್ಯವಾಗುತ್ತಿಲ್ಲ. ನಾಳೆ ಮಡಿಕೇರಿ ಖಾಸಗಿ ಕ್ಲಿನಿಕ್ನಲ್ಲಿ ಸ್ಕಾö್ಯನ್ ಮಾಡುವ ಜೊತೆಗೆ ರಕ್ತ ಪರೀಕ್ಷೆಯನ್ನು ಮತ್ತೊಮ್ಮೆ ಮಾಡೋಣ. ಆ ಮೇಲೆ ಮೈಸೂರು ಅಥವಾ ಮಂಗಳೂರು ಆಸ್ಪತ್ರೆಗೆ ಹೋಗೋಣ ಎಂದು ಮಡಿಕೇರಿಯಲ್ಲಿರುವ ರೋಗಿಯ ಸಂಬAಧಿ ಒಬ್ಬರು ಸಲಹೆ ನೀಡಿದರು.
ಹಾಗಾಗಿ ತಾ. ೪ ರಂದು ಮಡಿಕೇರಿ ಖಾಸಗಿ ಪ್ರಯೋಗಾಲಯದಲ್ಲಿ ಮೊದಲು ಸ್ಕಾö್ಯನ್ ಮಾಡಲಾಯಿತು. ವರದಿಯಲ್ಲಿ ‘ಕಿಡ್ನಿ ಸೇರಿದಂತೆ ಎಲ್ಲವೂ ನಾರ್ಮಲ್’. ಬಳಿಕ ವೈದ್ಯರ ಸಲಹೆಯ ಮೇರೆಗೆ ರಕ್ತ ಪರೀಕ್ಷೆ ಮಾಡಲಾಯಿತು. ರಕ್ತ ಪರೀಕ್ಷೆಯ ವರದಿಯಲ್ಲಿ ‘ಎಲ್ಲವೂ ನಾರ್ಮಲ್’. ಇದಾದ ನಂತರ ಸರಕಾರಿ ಆಸ್ಪತ್ರೆಯ ಪ್ರಯೋಗಾಲಯದ ವರದಿಯ ಬಗ್ಗೆ ಅಲ್ಲಿನ ವೈದ್ಯರ ಗಮನಕ್ಕೆ ತರಲಾಯಿತು. ವರದಿಯನ್ನು ಸೂಕ್ಷö್ಮವಾಗಿ ಪರಿಶೀಲಿಸಿದ ವೈದ್ಯರು ‘ವರದಿಯಲ್ಲಿ ಟೈಪ್ ಮಾಡಿರುವುದು ತಪ್ಪಾಗಿದೆ’! ಎಂದರು.
S.ಅಖಇAಖಿIಓIಓಇ ೦.೮ ಮತ್ತು ಃಐಔಔಆ Uಖಇಂ ೨೪ ಎಂಬದರ ಬದಲು S.ಅಖಇಂಖಿIಓIಓಇ ೨೪ ಮತ್ತು ಃಐಔಔಆ Uಖಇಂ ೦.೮ ಎಂದು ಸರಕಾರಿ ಆಸ್ಪತ್ರೆಯ ಪ್ರಯೋಗಾಲಯದ ವರದಿಯಲ್ಲಿತ್ತು. ಈ ಒಂದು ಎಡವಟ್ಟು ಇಡೀ ಕುಟುಂಬದಲ್ಲಿ ಮೂರು ದಿನ ಆತಂಕ ಸೃಷ್ಟಿಸಿತು. ಪ್ರಯೋಗಾಲಯದ ಸಿಬ್ಬಂದಿಗಳು ನಿರ್ಲಕ್ಷö್ಯ ತೋರಿದರೆ ಅಮಾಯಕ ಜೀವಗಳಿಗೆ ತೊಂದರೆಯಾಗಲಿದೆ. ಇದರ ಬಗ್ಗೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ.
-ಮುಸ್ತಫ ಸಿದ್ದಾಪುರ