ಮಡಿಕೇರಿ, ಆ. ೫: ಕೊಡವ ಜನಾಂಗ ಹಾಗೂ ಜಮ್ಮಾ ಹಿಡುವಳಿದಾರರಿಗೆ ಕೋವಿ ಹಕ್ಕು ವಿನಾಯಿತಿ ನೀಡಲಾಗಿರುವ ವಿಚಾರಕ್ಕೆ ಸಂಬAಧಿಸಿದAತೆ ಇದನ್ನು ಪ್ರಶ್ನಿಸಿ ಯಾಲದಾಳು ಕೆ. ಚೇತನ್ ಸಲ್ಲಿಸಿರುವ ಅರ್ಜಿಯ ಕುರಿತಾಗಿ ‘ಇಂಪ್ಲೀಡ್’ ಆಗಲು ಪ್ರತಿವಾದಿಯಾಗಿ ಪರಿಗಣಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಸಿ.ಎನ್.ಸಿ. ಸಂಘಟನೆ ಹಾಗೂ ಫೆಡರೇಷನ್ ಆಫ್ ಕೊಡವ ಸಮಾಜ ಈ ಬಗ್ಗೆ ಮುಂದೆ ಬಂದಿದ್ದು, ಹಿರಿಯ ವಕೀಲರಾದ ಎ.ಎಸ್. ಪೊನ್ನಣ್ಣ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಇದರ ವಿಚಾರಣೆ ತಾ. ೧೧ರಂದು ನಡೆಯಲಿದೆ.