ಉಡುಪಿ, ಆ. ೫ : ತಾ.೧ ರಂದು ಜಿಲ್ಲೆಯ ಅಮತ್ತಿ ಹೊಸೂರುವಿನ ಯುವತಿ ದಶಮಿ ಉಡುಪಿಯ ಮಲ್ಪೆ ಬೀಚ್‌ಗೆ ಗೆಳೆಯರೊಂದಿಗೆ ತೆರಳಿದ್ದಾಗ ಉಡುಪಿ, ಆ. ೫ : ತಾ.೧ ರಂದು ಜಿಲ್ಲೆಯ ಅಮತ್ತಿ ಹೊಸೂರುವಿನ ಯುವತಿ ದಶಮಿ ಉಡುಪಿಯ ಮಲ್ಪೆ ಬೀಚ್‌ಗೆ ಗೆಳೆಯರೊಂದಿಗೆ ತೆರಳಿದ್ದಾಗ ಕ್ರಮವಹಿಸಿದೆ. ಬೀಚಿನ ಪ್ರಮುಖ ಭಾಗಗಳಲ್ಲಿ ನೆಟ್ ಅಳವಡಿಸಿದ್ದು, ಸಾರ್ವಜನಿಕರು ನೀರಿಗೆ ಇಳಿಯದಂತೆ ಸೂಚಿಸಲಾಗಿದೆ.

೫ ರಿಂದ ೬ ಅಡಿ ಉದ್ದದ ನೆಟ್ ಅನ್ನು ೧ ಕಿ.ಮೀ ವ್ಯಾಪ್ತಿಗೆ ಅಳವಡಿಸಲಾಗಿದೆ. ಇದರೊಂದಿಗೆ ಕೆಂಪು ಬಾವುಟಗಳನ್ನು ಸಿಕ್ಕಿಸಲಾಗಿದ್ದು ಸಾರ್ವಜನಿಕರು ನೀರಿಗಿಳಿಯದಂತೆ ಸೂಚನಾ ಫಲಕಗಳನ್ನು ಇರಿಸಲಾಗಿದೆ. ನೆಟ್ ದಾಟಿ ಹೋದಲ್ಲಿ ೫೦೦ ರೂ ದಂಡ ವಿಧಿಸಬೇಕಾಗುತ್ತದೆ ಎಂದು ಬೀಚ್ ಅಭಿವೃದ್ಧಿ ಸಮಿತಿ ಪ್ರಮುಖರು ತಿಳಿಸಿದ್ದಾರೆ.