ನಾಪೋಕ್ಲು, ಆ. ೫: ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಮಾರುಕಟ್ಟೆ ಬಳಿ ತ್ಯಾಜ್ಯದ ರಾಶಿ; ಸಾರ್ವಜನಿಕರ ಆಕ್ಷೇಪ’ ಎಂಬ ವರದಿಗೆ ಸ್ಪಂದಿಸಿದ ನಾಪೋಕ್ಲು ಗ್ರಾಮ ಪಂಚಾಯಿತಿ ಆಡಳಿತ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ ಮಾರುಕಟ್ಟೆ ಆವರಣವನ್ನು ಸ್ವಚ್ಛಗೊಳಿಸಿದೆ.
ಈ ಬಗ್ಗೆ `ಶಕ್ತಿ’ಗೆ ಹೇಳಿಗೆ ನೀಡಿದ ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಕಸ ವಿಂಗಡಣಾ ಘಟಕಕ್ಕೆ ತೆರಳುವ ರಸ್ತೆಯನ್ನು ಕಾಂಕ್ರಿಟಿಕರಣ ಮಾಡಿರುವುದರಿಂದ ತ್ಯಾಜ್ಯವನ್ನು ಮಾರುಕಟ್ಟೆ ಬಳಿ ಸುರಿಯಲಾಗಿತ್ತು. ಈಗ ತೆರವುಗೊಳಿಸಲಾಗಿದೆ. ಪಂಚಾಯಿತಿ ವತಿಯಿಂದ ಕಸ ವಿಂಗಡಣಾ ಘಟಕ ಸ್ಥಾಪಿಸಲಾಗಿದೆ. ಆದರೆ ಇದಕ್ಕೆ ಸಾರ್ವಜನಿಕರು ಸಹಕಾರ ನೀಡುತ್ತಿಲ್ಲ.
ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ನೀಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಸಾರ್ವಜನಿಕರು ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.