ಸಚಿವ ಶ್ರೀನಿವಾಸ್ ಪೂಜಾರಿ
ಮಡಿಕೇರಿ, ಆ. ೬: ತಲಕಾವೇರಿ, ಭಗಂಡೇಶ್ವರ, ಪಾಡಿ ಇಗ್ಗುತ್ತಪ್ಪ ಹಾಗೂ ಓಂಕಾರೇಶ್ವರ ದೇವಾಲಯದ ಸಮಿತಿ ರಚನೆ ಸಂಬAಧ ಧಾರ್ಮಿಕ ಪರಿಷತ್ ತೀರ್ಮಾನ ಕೈಗೊಂಡು ಸಮಿತಿ ರಚನೆ ಮಾಡಲಿದೆ ಎಂದು ಸಂಪುಟ ದರ್ಜೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ನಗರದ ಬಿಜೆಪಿ ಕಚೇರಿಗೆ ಆಗಮಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವೆಲ್ಲಾ ದೇವಾಲಯಗಳು ಎ ದರ್ಜೆ ಆಗಿರುವುದರಿಂದ ಧಾರ್ಮಿಕ ಪರಿಷತ್ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಕೊರೊನಾ ಕಾರಣದಿಂದ ತಡವಾಗಿದೆ; ಸದ್ಯದಲ್ಲೇ ಸಮಿತಿ ರಚನೆಯಾಗಲಿದೆ ಎಂದರು.
ಜಿಲ್ಲೆಯಲ್ಲಿ ಕೊಳೆರೋಗದಿಂದ ಕಾಫಿ ಫಸಲು ನಾಶವಾಗುತ್ತಿದ್ದು, ಇದಕ್ಕೆ ಪರಿಹಾರ ನೀಡಬೇಕೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.