ನಾಪೋಕ್ಲು, ಆ. ೫: ಮಹಾತ್ಮಾ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯಾನ ನಿರ್ಮಾಣದಲ್ಲಿ ಉತ್ತಮ ಪ್ರಗತಿ ಸಾಧಿಸಿದ ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಪಂಚಾಯತ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈಚೆಗೆ ಕುಶಾಲನಗರದ ರೈತ ಭವನದಲ್ಲಿ ನಡೆದ ಪಂಚಾಯತ್ರಾಜ್ ದಿನಾಚರಣೆ ಕಾರ್ಯಕ್ರಮದಲ್ಲಿ ಬಲ್ಲಮಾವಟಿ ಪಂಚಾಯತ್ಗೆ ಈ ಪುರಸ್ಕಾರ ನೀಡಲಾಗಿದೆ. ನೆಲಜಿ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಆಕರ್ಷಕ ಉದ್ಯಾನವನ ನಿರ್ಮಿಸಲಾಗಿದೆ. ಜೊತೆಗೆ ದೊಡ್ಡಪುಲಿಕೋಟು ಗ್ರಾಮ ಶಾಲೆಯ ಆವರಣದಲ್ಲೂ ಉದ್ಯಾನವನ ಕಾರ್ಯ ಪ್ರಗತಿಯಲ್ಲಿದೆ.
ಸಮುದಾಯದ ಪರಿಸರಕ್ಕೆ ಸಂಬAಧಿಸಿದAತೆ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವತಿಯಿಂದ ಕೇಂದ್ರ ಪುರಸ್ಕೃತ ಮಹಾತ್ಮಾ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ೩ ಲಕ್ಷ ರೂ.ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಿದ್ದು, ಅಂಗನವಾಡಿಗೆ ಬರುವ ಪುಟ್ಟ ಮಕ್ಕಳ ಮನಸ್ಸಿನಲ್ಲಿ ಪರಿಸರ ಪ್ರೇಮವನ್ನು ಹುಟ್ಟುಹಾಕುವಲ್ಲಿ ಇದು ಸಾಕ್ಷಿಯಾಗಿದೆ. ಉದ್ಯಾನವನದ ಅಂದ ಹೆಚ್ಚಿಸಲು ಗ್ರಾಮದ ಮಹಿಳಾ ಸ್ವಸಹಾಯ ಸಂಘಗಳೂ ಕೈಜೋಡಿಸಿವೆ. ನೆಲಜಿ ಗ್ರಾಮದಲ್ಲಿ ಉದ್ಯಾನವನ ರೂಪಿಸಲು ಸಾರ್ವಜನಿಕರು ನೆರವು ನೀಡಿದ್ದು ಅಂದವಾಗಿ ರೂಪುಗೊಂಡಿದೆ. ದೊಡ್ಡಪುಲಿಕೋಟು ಗ್ರಾಮದ ಸರಕಾರಿ ಶಾಲೆಯ ಬಳಿ ಉದ್ಯಾನವನ ರೂಪುಗೊಳ್ಳುತ್ತಿದೆ ಎಂದು ಪಿಡಿಒ ಶ್ರೀಧರ್ ತಿಳಿಸಿದ್ದಾರೆ.
ಮಹಾತ್ಮಾ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ನೆಲಜಿ ಗ್ರಾಮದ ಅಂಗನವಾಡಿ ಆವರಣದಲ್ಲಿ ಉದ್ಯಾನವನ ರೂಪಿಸಲು ಕ್ರಿಯಾಯೋಜನೆ ಮಾಡಲಾಯಿತು.ಫಾರ್ಮರ್ಸ್ ಕ್ಲಬ್ ಸದಸ್ಯರೂ ಆಸಕ್ತಿಯಿಂದ ಉದ್ಯಾನವನ ರೂಪಿಸಲು ನೆರವು ನೀಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣವಟ್ಟೀರ ಕುಶಾಲಪ್ಪ ಹೇಳಿದ್ದಾರೆ.
-ದುಗ್ಗಳ ಸದಾನಂದ