ಮಡಿಕೇರಿ, ಆ. ೫: ತುಮಕೂರಿನ ಗುರುಕುಲ ಕಲಾಪ್ರತಿಷ್ಠಾನದ ಪ್ರಥಮ ಗುರುಕುಲ ಕಲಾ ಸಮ್ಮೇಳನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಗುರುಕುಲ ಕೊಡಗು ಜಿಲ್ಲಾ ಘಟಕದ ಸದಸ್ಯ ಕಿಗ್ಗಾಲು ಗಿರೀಶ್ ಅವರಿಗೆ ಗುರುಕುಲ ಸೌರ್ವಭೌಮ ಕವಿತಾ ಕೃಷ್ಣ ನೀಡಿ ಗೌರವಿಸಲಾಗುತ್ತಿದೆ ಎಂದು ಕೊಡಗು ಘಟಕದ ಜಿಲ್ಲಾಧ್ಯಕ್ಷೆ ಕೆ. ಶೋಭಾ ರಕ್ಷಿತ್ ತಿಳಿಸಿದ್ದಾರೆ.