ಸುAಟಿಕೊಪ್ಪ, ಆ. ೪: ತಾ. ೩ರ ರಾತ್ರಿ ಸುರಿದ ಮಳೆಗೆ ಸುಂಟಿಕೊಪ್ಪ - ಮಾದಾಪುರ ರಸ್ತೆಯ, ಸ್ವಸ್ಥ ಶಾಲೆಯ ಬಳಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಇಂದು ಬೆಳಿಗ್ಗೆ ಈ ರಸ್ತೆಯಲ್ಲಿ ಸಂಚರಿಸಿದ ವಾಹನ ಚಾಲಕರು ಈ ಕುರಿತು ಮಾಹಿತಿ ನೀಡಿದ್ದು, ಕೂಡಲೇ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಎಚ್ಚರಿಕೆ ನೀಡಿದರು.

ನಂತರ ಮಾದಾಪುರದಿಂದ ಬರುವ ವಾಹನಗಳನ್ನು ಗುಂಡುಗುಟ್ಟಿ ಶಾಲೆಯಿಂದ ನಾಕೂರು ರಸ್ತೆಗಾಗಿ ಸುಂಟಿಕೊಪ್ಪ ಬರುವಂತೆ, ಗುಂಡುಗುಟ್ಟಿ ಶಾಲೆಯ ಬಳಿ ಬ್ಯಾರಿಕೇಡ್‌ನ್ನು ಇರಿಸ ಲಾಗಿತ್ತು. ಕುಸಿತಗೊಂಡ ರಸ್ತೆಯನ್ನು ಜೆಸಿಬಿ ಮೂಲಕ ದುರಸ್ತಿಪಡಿಸ ಲಾಗಿದ್ದು, ಸುಂಟಿಕೊಪ್ಪ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ, ಇಂಜಿನಿಯರ್ ಗಳು, ಪಂಚಾಯಿತಿ ಉಪಾಧ್ಯಕ್ಷರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು.