ಚೆಟ್ಟಳ್ಳಿ, ಆ. ೪: ಸೈನಿಕರು ದೇಶ ಕಾಯುವ ಯೋಧರನ್ನು ಪ್ರತಿಯೊಬ್ಬ ಪ್ರಜೆಯೂ ಗೌರವಿಸಬೇಕಾಗಿದೆ. ವಿಶಿಷ್ಟವಾಗಿ ಕೊಡಗಿನ ಎಲ್ಲಾ ಜನಾಂಗ ದಿಂದಲೂ ಯೋಧರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೋಯಿಕೇರಿಯಲ್ಲಿ ಆಕಸ್ಮಿಕವಾಗಿ ನಡೆದ ಅಪಘಾತದಿಂದಾಗಿ ನಡೆದ ಅಹಿತಕರ ಘಟನೆ ಸೈನಿಕನೆಂದು ಅರಿತುಕೊಂಡಾಗಿರಲಿಲ್ಲ ಎಂಬುದು ಘಟನೆಯ ವರದಿಗಳಿಂದ ಸ್ಪಷ್ಟವಾಗುತ್ತದೆ.
ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ನಡೆದ ಘಟನೆಯನ್ನು ಮುಂದಿಟ್ಟುಕೊAಡು, ಒಂದು ಸಮುದಾಯವನ್ನು ಗುರಿಯಾಗಿಸಿ ಜಿಲ್ಲೆಯಲ್ಲಿನ ಶಾಂತಿ ಸುವ್ಯವಸ್ಥೆಯನ್ನು ಕದಡುವ ಪ್ರಯತ್ನ ಅತ್ಯಂತ ಖಂಡನೀಯ ಎಂದು ಎಸ್.ಕೆ.ಎಸ್.ಎಸ್.ಎಫ್. ಕೊಡಗು ಜಿಲ್ಲಾಧ್ಯಕ್ಷ ತಮ್ಲೀಖ್ ದಾರಿಮಿ ಮಡಿಕೇರಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸೈನಿಕನೆಂದು ಅರಿತುಕೊಂಡು ಉದ್ದೇಶಪೂರ್ವಕವಾಗಿ ನಡೆಸಿರುವ ಘಟನೆಯಾದಲ್ಲಿ ಅದನ್ನು ಸಹ ತೀವ್ರವಾಗಿ ಖಂಡಿಸಬೇಕಾಗಿದೆ. ಈ ವಿಚಾರದಲ್ಲಿ ಎರಡೂ ಕಡೆಯವರಿಂದ ಎಲ್ಲಾ ಅಪಘಾತಗಳ ಬಳಿಕ ನಡೆಯುತ್ತಿರುವ ಸಾಮಾನ್ಯ ತಪ್ಪುಗಳು ಸಂಭವಿಸಿ ರುವುದಾಗಿ ತಿಳಿದು ಬಂದಿದೆ. ಆದರೆ ನೈಜ ವಿಷಯಗಳನ್ನು ಮರೆಮಾಚಿ ಧರ್ಮದ ಲೇಪನವಿಟ್ಟು ಪರಸ್ಪರ ದ್ವೇಷ ಸೃಷ್ಟಿಸಿ ಸೌಹಾರ್ದತೆಯನ್ನು ಕೆಡಿಸಲು ಇದರ ಹಿಂದೆ ಕರಾಳ ಹಸ್ತಗಳು ವ್ಯವಸ್ಥಿತವಾಗಿ ಕೆಲಸ ನಿರ್ವಹಿಸುತ್ತಿರುವುದಾಗಿ ಬೆಳವಣಿಗೆಯಲ್ಲಿ ಕಂಡುಬರುತ್ತಿದೆ. ಇದರ ಅಂಗವಾಗಿ ಹೊರ ಜಿಲ್ಲೆಯ ಮತಾಂಧ ಶಕ್ತಿಗಳ ಬೆಂಬಲದೊAದಿಗೆ ಮಡಿಕೇರಿಯಲ್ಲಿ ನಡೆದ ಪ್ರತಿಭಟನೆ ಶಾಂತಿಯು ತವಾದ ಕೊಡಗಿನಲ್ಲಿ ಅನಗತ್ಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಅದರಂತೆಯೇ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿರುವುದು ಹಾಸ್ಯಾಸ್ಪದ ಎಂದಿದ್ದಾರೆ.