ವೀರಾಜಪೇಟೆ, ಆ. ೪: ಆರೋಗ್ಯ ಅಂಗಡಿಯಿAದ ದೊರಕುವ ಸರಕಲ್ಲ, ಪೌಷ್ಟಿಕ ಆಹಾರವನ್ನು ಸೇವನೆ ಮಾಡುವುದರ ಮುಖಾಂತರ ನಾವೇ ಅದನ್ನು ಕಾಪಾಡಿಕೊಳ್ಳಬೇಕು ಎಂದು ವೀರಾಜಪೇಟೆಯ ಆಯುರ್ವೇದ ವೈದ್ಯೆ ಡಾ. ರಕ್ಷಾ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಆಶ್ರಯದಲ್ಲಿ ಮಹಿಳಾ ಕಾರ್ಯಕ್ರಮದಡಿಯಲ್ಲಿ ಚಿಕ್ಕಪೇಟೆಯ ಮಹಾಲಕ್ಷಿö್ಮ ಜ್ಞಾನ ವಿಕಾಸ ಕೇಂದ್ರದ ಸಹಯೋಗದಲ್ಲಿ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಬಾಲಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಕ್ಷಾ ಅವರು, ಆಟಿ ಕಷಾಯದಿಂದ ಮಹಿಳೆಯರ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪ್ರಕೃತಿ ಮೂಲಕವೇ ಔಷಧಿ ದೊರಕುತ್ತದೆ. ಮುಂದಿನ ಪೀಳಿಗೆಗೂ ಪ್ರಕೃತಿದತ್ತವಾಗಿ ದೊರಕುವ ಔಷಧೀಯು ಗುಣಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಪರಿಚಯಿಸುವ ಹಾಗೂ ಉಳಿಸಿ ಬೆಳೆಸುವ ಕಾರ್ಯ ಮಾಡುವಂತಾಗಬೇಕು ಎಂದರು.

ವೀರಾಜಪೇಟೆ ತಾಲೂಕಿನ ಯೋಜನಾಧಿಕಾರಿ ಪದ್ಮಯ್ಯ ಮಾತನಾಡಿ, ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದೈಹಿಕ ಮಾನಸಿಕ ಹಾಗೂ ಆರ್ಥಿಕವಾಗಿ ಸದೃಢರಾಗಿದ್ದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.

ಬಾಲಾAಜನೇಯ ದೇವಸ್ಥಾನದ ಮುಖ್ಯಸ್ಥ ಬಾಬಾ ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಕೃಷ್ಣ ಪ್ರಗತಿಬಂಧು ಸಂಘದ ಪ್ರಬಂಧಕ ಫಿಲೋಮಿನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಪೇಟೆ ಒಕ್ಕೂಟದ ಅಧ್ಯಕ್ಷೆ ವಿಮಲಾ ಹಾಗೂ ಮೇಲ್ವಿಚಾರಕಿ ರತ್ನ ಮೈಪಾಲ ಪೌಷ್ಟಿಕ ಆಹಾರದ ಕುರಿತಂತೆ ಮಾಹಿತಿ ನೀಡಿದರು.

ಮಹಾಲಕ್ಷಿö್ಮ ಜ್ಞಾನವಿಕಾಸ ಕೇಂದ್ರದ ಕಳೆದ ಸಾಲಿನ ಸಾಧನೆ ಬಗ್ಗೆ ಚಿಕ್ಕಪೇಟೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಪದ್ಮಲತಾ ವರದಿ ವಾಚಿಸಿದರು. ಸೇವಾ ಪ್ರತಿನಿಧಿಗಳಾದ ಮೀನಾಕ್ಷಿ ಮತ್ತು ರೇಖಾ ಹಾಜರಿದ್ದರು.

ಇದೇ ಸಂದರ್ಭ ಜ್ಞಾನವಿಕಾಸ ಕೇಂದ್ರ ವತಿಯಿಂದ ಆಯೋಜಿಸಲಾಗಿದ್ದ ಪೌಷ್ಟಿಕ ಆಹಾರ ಮೇಳದಲ್ಲಿ ಭಾಗವಹಿಸಿ ಉತ್ತಮ ಹಾಗೂ ಗುಣಮಟ್ಟದ ಆಹಾರ ತಯಾರಿಸಿದವರಿಗೆ ಬಹುಮಾನ ವಿತರಿಸಲಾಯಿತು.

ಮಹಾಲಕ್ಷಿö್ಮ ಜ್ಞಾನವಿಕಾಸ ಕೇಂದ್ರದ ಸದಸ್ಯೆ ಅಂಬಿಕಾ ಸ್ವಾಗತಿಸಿ, ಸಮನ್ವಯಾಧಿಕಾರಿ ಆರ್. ಶ್ರೇಯಾ ನಿರೂಪಿಸಿದರೆ, ಕೇಂದ್ರದ ಸದಸ್ಯೆ ಶಿಲ್ಮಿ ವಂದಿಸಿದರು.